ನವದೆಹಲಿ: ಕಳ್ಳಬೇಟೆ ಹಾಗೂ ಅನಾರೋಗ್ಯ ಸೇರಿದಂತೆ ಅಸಹಜ ಕಾರಣಗಳಿಂದ ದೇಶದಲ್ಲಿ ನಾಲ್ಕು ವರ್ಷಗಳಲ್ಲಿ (2021ರಿಂದ ಈಚೆಗೆ) 71 ಹುಲಿಗಳು ಸಾವಿಗೀಡಾಗಿವೆ ಎಂದು ಪರಿಸರ ಸಚಿವಾಲಯ ಸೋಮವಾರ ತಿಳಿಸಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, 2021 ರಿಂದ ಈಚೆಗೆ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು (20) ಹುಲಿಗಳು ಸಾವಿಗೀಡಾಗಿವೆ.
2021ರ ಈಚೆಗೆ ಮೃತಪಟ್ಟ ಹುಲಿಗಳ ಸಂಖ್ಯೆ
2021- 20
2022-25
2023 - 25
2024-1
ಅಲ್ಲದೇ ದೇಶದಲ್ಲಿ ಹುಲಿಗಳ ಸಂಖ್ಯೆ ವಾರ್ಷಿಕ ಶೇ 6ರ ದರದಲ್ಲಿ ಹೆಚ್ಚುತ್ತಿದೆ ಎಂದೂ ಸಚಿವರು ಹೇಳಿದ್ದಾರೆ.