HEALTH TIPS

ಶಬರಿಮಲೆಯಲ್ಲಿ ಭಕ್ತರ ನೂಕು-ನುಗ್ಗಲು-ನಿನ್ನೆಯೊಂದೇ ದಿನ 75,000 ಭಕ್ತರ ಭೇಟಿ- 7,000 ಮಂದಿ ಮಕ್ಕಳು

ಪತ್ತನಂತಿಟ್ಟ: ಶಬರಿಮಲೆಯಲ್ಲಿ ನಿನ್ನೆಯೂ ಭಕ್ತರ ದಂಡೇ ನೆರೆದಿತ್ತು. ನಿನ್ನೆ 75,000 ಮಂದಿ ದರ್ಶನಕ್ಕೆ ಆಗಮಿಸಿದ್ದರು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

ನಿನ್ನೆ ರಾತ್ರಿಯವರೆಗಿನ ಅಂಕಿಅಂಶಗಳ ಪ್ರಕಾರ 75,000 ಜನರು ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಪ್ರತಿ ನಿಮಿಷಕ್ಕೆ 80 ಯಾತ್ರಿಕರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ವೇಳೆ ನಿನ್ನೆ 7000 ಮಕ್ಕಳು ಭೇಟಿ ನೀಡಿದ್ದರು. ಭಕ್ತರಿಗೆ ಮೆಟ್ಟಿಲು ಹತ್ತಲು ಸಹಾಯ ಮಾಡಲು 45 ಪೋಲೀಸರನ್ನು ನಿಯೋಜಿಸಲಾಗಿದೆ. ಪ್ರತಿ 15 ನಿಮಿಷಗಳಿಗೊಮ್ಮೆ ತಂಡ ಬದಲಾಯಿಸಲಾಗುತ್ತದೆ.

ಸನ್ನಿಧಾನಂ ತೆರೆದ ನಾಲ್ಕು ದಿನಗಳಲ್ಲಿ ಲಕ್ಷಗಟ್ಟಲೆ ಅಯ್ಯಪ್ಪ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ. ನಿನ್ನೆಯವರೆಗಿನ ಮಾಹಿತಿ ಪ್ರಕಾರ 2.26 ಲಕ್ಷ ಅಯ್ಯಪ್ಪ ಭಕ್ತರು ಅಯ್ಯಪ್ಪನ ದರ್ಶನಕ್ಕೆ ಮತ್ತು ಸನ್ನಿಧಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ನಿನ್ನೆಯಷ್ಟೇ 73000 ಭಕ್ತರು ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು ರಾತ್ರಿವರೆಗಿನ ಅಂಕಿ ಅಂಶಗಳಾಗಿವೆ.  ಬೆಳಗಿನ ಜಾವ 3 ಗಂಟೆಗೆ ವೇದಿಕೆ ತೆರೆದರೆ ನಿಮಿಷಕ್ಕೆ 80 ಜನರನ್ನು 18ನೇ ಮೆಟ್ಟಿಲು ಏರಿಸಲಾಗುತ್ತದೆ. ಸೋಪಾನಂ ತಲುಪಿದ ನಂತರ ಮುಂದೆ ಸಾಗುವ ಭಕ್ತಾದಿಗಳ ಹರಿವಿಗೆ ಅಡ್ಡಿಯಾಗುವ ರೀತಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುವ ಮೂಲಕ ಯಾರಿಗೂ ದರ್ಶನಕ್ಕೆ ಅವಕಾಶ ನೀಡುವುದಿಲ್ಲ.

ವಿಐಪಿಗಳು ಸೇರಿದಂತೆ ಜನರನ್ನು ದೇಗುಲದ ಹಿಂಭಾಗದ ಪ್ರಾಂಗಣದ ಮೂಲಕ ಕರೆತರಲಾಗುತ್ತದೆ ಮತ್ತು ಭಕ್ತರ ಸಾಲಿಗೆ ಸಮಾನಾಂತರವಾಗಿ ಮಾತ್ರ ದರ್ಶನ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ವೃಶ್ಚಿಕ 12ರ ನಂತರ ನೂಕು ನುಗ್ಗಲು ಇನ್ನಷ್ಟು ಹೆಚ್ಚಾಗಲಿದೆ ಎಂದು ದೇವಸ್ವಂ ಮಂಡಳಿ ಅಂದಾಜಿಸಿದೆ. ಯಾತ್ರಾರ್ಥಿಗಳ ಪ್ರಯಾಣಕ್ಕಾಗಿ ಕೆಎಸ್‍ಆರ್‍ಟಿಸಿ 383 ಬಸ್‍ಗಳನ್ನು ಪಂಬಾಗೆ ತಂದಿದೆ ಎಂದು ಶಬರಿಮಲೆ ಸನ್ನಿಧಾನಂ ಪೋಲೀಸ್ ವಿಶೇಷ ಅಧಿಕಾರಿ ಕೆ.ಇ.ಬೈಜು ಮಾಹಿತಿ ನೀಡಿ, ತೀರ್ಥಯಾತ್ರಾ ಮಾರ್ಗಗಳಲ್ಲಿ ಜೇಬುಗಳ್ಳತನದಂತಹ ಅಪರಾಧಗಳನ್ನು ತಡೆಯಲು ವಿಶೇಷ ಅನುಭವವುಳ್ಳ ಪೋಲೀಸ್ ತುಕಡಿಯನ್ನು ನೇಮಿಸಲಾಗಿದೆ. ಇದಕ್ಕಾಗಿ ನೆರೆಯ ರಾಜ್ಯಗಳ ಅನುಭವಿ ಪೆÇಲೀಸ್ ಅಧಿಕಾರಿಗಳ ತಂಡವನ್ನು ನಿಯೋಜಿಸಿರುವುದಾಗಿ ತಿಳಿಸಿರುವರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries