HEALTH TIPS

ಹವಾಮಾನ ಬದಲಾವಣೆ | ಶೇ 80ರಷ್ಟು ಭಾರತೀಯರಿಗೆ ಪರಿಣಾಮ: ವಿಜ್ಞಾನಿ ಡಾ. ಸೌಮ್ಯ

Top Post Ad

Click to join Samarasasudhi Official Whatsapp Group

Qries

       ಬಾಕು: ಭಾರತದಲ್ಲಿ ಬಹುತೇಕ ಎಲ್ಲರೂ ಈಗ ಹವಾಮಾನ ಬದಲಾವಣೆಯ ಪರಿಣಾಮಕ್ಕೆ ಗುರಿಯಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್‌ ಅವರು ಹೇಳಿದ್ದಾರೆ.

     ಅಜರ್‌ಬೈಜಾನ್‌ನಲ್ಲಿ ಸಿಒಪಿ29 ಪರಿಸರ ಸಮಾವೇಶದ ವೇಳೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸೌಮ್ಯ ಅವರು ಈ ಹೇಳಿಕೆ ನೀಡಿದ್ದಾರೆ.

      'ದೇಶದ ಆರ್ಥಿಕ ಸ್ಥಿರತೆ ಮತ್ತು ಜನರ ಆರೋಗ್ಯ ಸೇರಿದಂತೆ ಸೂಕ್ಷ್ಮ ವಿಷಯಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಪರಿಹರಿಸಲು ಅಂತರರಾಷ್ಟ್ರೀಯ ಸಹಯೋಗದ ತುರ್ತು ಅಗತ್ಯವಿದೆ' ಎಂದೂ ಒತ್ತಿ ಹೇಳಿದ್ದಾರೆ.

          ಭಾರತದಲ್ಲಿ ಪ್ರತಿಯೊಬ್ಬರೂ ಈಗ ಹವಾಮಾನ ಬದಲಾವಣೆಯ ಕಾರಣ ತೀವ್ರ ಉಷ್ಣಾಂಶದಿಂದ ಉಂಟಾಗುವ ರೋಗಗಳಿಗೆ ಗುರಿಯಾಗುತ್ತಾರೆ. ಮಹಿಳೆಯರು ಮತ್ತು ಮಕ್ಕಳು ಇದರಿಂದ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಅಡುಗೆಗಾಗಿ ಇಂಧನದ ಮೇಲೆ ನಿರಂತರವಾಗಿ ಅವಲಂಬಿತವಾಗಿರುವವರು ಅಪಾಯವನ್ನು ಎದುರಿಸುತ್ತಾರೆ.

           ಉಸಿರಾಟದ ಸಮಸ್ಯೆಯಿಂದ ಹಿಡಿದು, ಕೃಷಿ ಕ್ಷೇತ್ರದ ಮೇಲೆ ಅದರ ಪರಿಣಾಮದಿಂದ ಉಂಟಾಗುವ ಅಪೌಷ್ಟಿಕತೆಯಂತಹ ದೀರ್ಘಕಾಲೀನ ಸಮಸ್ಯೆಗಳವರೆಗೆ ಭಾರತದಲ್ಲಿ ಹವಾಮಾನ ಸಂಬಂಧಿತ ಆರೋಗ್ಯ ಸಮಸ್ಯೆಗಳು ವೈವಿಧ್ಯಮಯವಾಗಿವೆ. ದೇಶದ ಶೇ 80ರಷ್ಟು ಜನರು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ರೈತರಿಂದ ಹಿಡಿದು ನಗರ ಪ್ರದೇಶಗಳ ಎಲ್ಲರೂ ಈಗ ದುರ್ಬಲರಾಗಿದ್ದಾರೆ ಎಂದು ಸೌಮ್ಯ ಭಾರತ ಎದರಿಸುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries