ಮಂಜೇಶ್ವರ: ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22ರ ವರೆಗೆ ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಂಪು ಕಾಸರಗೋಡಿನ ಮನೆ ಮನಗಳಲ್ಲಿ ಹರಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪೆÇ್ರ ಶ್ರೀನಾಥ್ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಾರ್ಥ ಕನ್ನಡ ಸಂಸ್ಕøತಿ ಇಲಾಖೆ ಆಯೋಜಿಸಿರುವ ಕನ್ನಡ ಸಾಹಿತ್ಯ ತೇರು ರಥವು ಕಾಸರಗೋಡು ಜಿಲ್ಲೆಗೆ ಆಗಮನದ ಅಂಗವಾಗಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡುವಿಗೆ ಆಗಮಿಸಿದಾಗ ನೀಡಿದ ಸ್ವಾಗತ ಕಾರ್ಯಕ್ರಮದಲ್ಲಿ ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈಯವರ ಪುತ್ಥಳಿಗೆ ಮಾಲಾರ್ಪಣೆ ನಡೆಸಿ ಮಾತನಾಡಿದರು. ಕನ್ನಡವು ಮಣ್ಣಿನ ಭಾಷೆ. ಜನಕೋಟಿಗಳ ಹೃದಯದ ಭಾಷೆ. ಜೀವಂತಿಕೆಯ ಸಂವಹನದ ಭಾಷೆಯಾಗಿದ್ದು, ಸಾಹಿತ್ಯದ ರಥಕ್ಕೆ ಮಂಜೇಶ್ವರದ ಮಣ್ಣಿನಲ್ಲಿ ನೀಡಿದ ಸ್ವಾಗತವು ಕರ್ನಾಟಕ - ಕಾಸರಗೋಡಿನ ಅವಿನಾಭಾವ ಬೆಸುಗೆಗೆ ಸಾಕ್ಷಿಯಾಗಿದೆ. ಮಲೆಯಾಳಿಕರಣದ ನಡುವೆಯೂ ಕಾಸರಗೋಡಿನಲ್ಲಿ ಕನ್ನಡಾಂಬೆಯು ಇನ್ನು ಕನ್ನಡಿಗರ ಕಣ್ಮಣಿಯಾಗಿರುವುದು ನಿಜಕ್ಕೂ ಅನುಪಮ ಆನಂದವನ್ನು ನೀಡುತ್ತಿದೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಕವಿಯೊಬ್ಬರ ಯಕ್ಷಗಾನದ ಈ ನೆಲದಲ್ಲಿ ಕನ್ನಡದ ಕೈಂಕರ್ಯ ಇನ್ನಷ್ಟು ಸೊಗಸಾಗಿ ಬೆಳೆದು ಬರಲಿ ಎಂದು ತಿಳಿಸಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷರಾದ ಕೆ.ಆರ್ ಜಯಾನಂದ ಅವರು ರಥದಲ್ಲಿದ್ದ ಭುವನೇಶ್ವರಿ ಮಾತೆಯ ಪ್ರತಿಮೆಗೆ ಹಾರಾರ್ಪಣೆ ಮಾಡಿದರು. ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಗಮಕ ಸಾಹಿತ್ಯ ಪರಿಷತ್ ಅಧ್ಯಕ್ಷ ತೆಕ್ಕೆಕೆರೆ ಶಂಕರ ನಾರಾಯಣ ಭಟ್, ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ರಾಜಗೋಪಾಲ ಸಿ.ಕೆ, ಮಂಜೇಶ್ವರ ಗೋವಿಂದ ಪೈ ಟ್ರಸ್ಟ್ ಕಾರ್ಯದರ್ಶಿ ಉಮೇಶ್ ಸಾಲ್ಯಾನ್, ಸಾಮಾಜಿಕ ಕಾರ್ಯಕರ್ತರಾದ ಹರೀಶ್ಚಂದ್ರ ಮಂಜೇಶ್ವರ, ಆದರ್ಶ್ ಬಿ.ಎಂ, ಅಶ್ವತ್ಥ್ ಪೂಜಾರಿ ಲಾಲ್‍ಬಾಗ್, ಸಂಕಬೈಲ್ ಸತೀಶ್ ಅಡಪ, ವರ್ಕಾಡಿ ಇಗರ್ಜಿ ಫಾದರ್ ವಂದನೀಯ ಬಾಸಿಲ್ ವಾಸ್, ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ರಂಗದ ಪ್ರತಿನಿಧಿಗಳು ಪಾಲ್ಗೊಮಡಿದ್ದರು.
ರಥವು ತಲಪಾಡಿಗೆ ತಲುಪಿದಾಗ ಮಂಜೇಶ್ವರ ಉಪಜಿಲ್ಲಾ ಮುಖ್ಯೋಪಾಧ್ಯಾಯರ ವೇದಿಕೆಯ ಕಾರ್ಯದರ್ಶಿ ಶ್ಯಾಮ್ ಭಟ್ ಪೈವಳಿಕೆ ತಾಯಿ ಭುವನೇಶ್ವರಿಗೆ ಹೂ ಹಾರ ಹಾಕಿದರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪೆÇ್ರ| ಶ್ರೀನಾಥ್ ಅವರು ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಅವರಿಗೆ ಕನ್ನಡಾಂಬೆಯ ಧ್ವಜವನ್ನು ಹಸ್ತಾಂತರಿಸುವ ಮೂಲಕ ಕೇರಳ ಭಾಗಕ್ಕೆ ರಥ ಸಾಗಿ ಬರಲು ಚಾಲನೆ ನೀಡಿದರು.
ನಿತ್ಯ ಸುದ್ದಿಗಳಿಗಾಗಿ ಸಮರಸ ಸುದ್ದಿ. ಡಾಟ್ ಕಾಂ ಗೆ ಭೇಟಿ ನೀಡಿ.
ಜನಪರ, ಕ್ರಿಯಾತ್ಮಕ ಮಾಧ್ಯಮಗಳಿಗೆ ಜನಬೆಂಬಲ ಅಗತ್ಯ
ನಿತ್ಯ ಸತ್ಯದೊಂದಿಗೆ ಧನಾತ್ಮಕ ಸಮಾಜ ನಿರ್ಮಾಣದ ಲಕ್ಷ್ಯವಿರಿಸಿ ಮುನ್ನಡೆಯುತ್ತಿರುವ ಸಮರಸ ಸುದ್ದಿ ಬಳಗಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ.
ಸಮರಸ ಸುದ್ದಿ.ಡಾಟ್ ಕಾಮ್ ಗೆ ದೇಣಿಗೆ ನೀಡಿ ಹೆಗಲು ನೀಡಿ.
ಈ ಕೆಳಗಿನ ಸ್ಕ್ಯಾನರ್ ಮೂಲಕ ಗೂಗಲ್ ಪೇ ಮಾಡಲು ಕ್ಲಿಕ್ ಮಾಡಿ.
ಇದು ಗಡಿನಾಡು ಕಾಸರಗೋಡಿನ ಜನಧ್ವನಿ.