ಮುಂಬೈ: ಬ್ಯಾಂಕ್‌ಗಳು ಕೈಗಾರಿಕೆಗಳಿಗೆ ನೀಡುವ ಸಾಲದ ಪ್ರಮಾಣ ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ, ಶೇ 8ರಷ್ಟು ಹೆಚ್ಚಳವಾಗಿದೆ ಎಂದು ಆರ್‌ಬಿಐ ಅಂಕಿ-ಅಂಶ ತಿಳಿಸಿದೆ.
ಅಕ್ಟೋಬರ್‌ನಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ನೀಡಿದ ಸಾಲವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 15.5 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ಕೆಮಿಕಲ್ ಮತ್ತು ಕೆಮಿಕಲ್ ಉತ್ಪನ್ನಗಳು, ಪೆಟ್ರೋಲಿಯಂ, ಕಲ್ಲಿದ್ದಲು ಉತ್ಪನ್ನಗಳು ಮತ್ತು ಅಣು ಇಂಧನಕ್ಕೆ ಸಂಬಂಧಿಸಿದ ಕೈಗಾರಿಕೆಗಳಿಗೆ ನೀಡಿದ ಸಾಲದ ಪ್ರಮಾಣದಲ್ಲಿ ಏರಿಕೆಯಾಗಿದೆ.
ವೈಯಕ್ತಿಕ ಸಾಲದ ಪ್ರಮಾಣ ಶೇ 15.8ರಷ್ಟಿದ್ದು, ಕಳೆದ ಅಕ್ಟೋಬರ್‌ಗೆ (ಶೇ 18) ಹೋಲಿಸಿದರೆ ಇಳಿಕೆಯಾಗಿದೆ. ಆದರೆ, ವೈಯಕ್ತಿಕ ಸಾಲ ವಿಭಾಗದಲ್ಲಿ ಪ್ರಮುಖ ಎನಿಸಿರುವ 'ಗೃಹ ಸಾಲ'ದ ಪ್ರಮಾಣ ಕಳೆದ ಬಾರಿಗಿಂತ ಏರಿಕೆಯಾಗಿದೆ.