HEALTH TIPS

ಉಕ್ರೇನ್‌ ಗಡಿಯಲ್ಲಿ 8 ಸಾವಿರ ಉತ್ತರ ಕೊರಿಯಾ ಪಡೆಗಳು: ಅಮೆರಿಕ

           ವಾಷಿಂಗ್ಟನ್‌: ಉತ್ತರ ಕೊರಿಯಾದ ಸುಮಾರು 8,000 ಯೋಧರು ಉಕ್ರೇನ್‌ ಗಡಿಯ ಬಳಿ ನಿಯೋಜಿಸಲಾಗಿದ್ದು, ರಷ್ಯಾ ಪಡೆಗಳಿಗೆ ನೆರವಾಗಲು ಸಿದ್ಧರಾಗುತ್ತಿದ್ದಾರೆ ಎಂದು ಅಮೆರಿಕ ತಿಳಿಸಿದೆ.

        ಹೊಸ ಅಂಕಿ ಅಂಶವು ಹಿಂದಿನದಕ್ಕಿಂತ ತೀರಾ ಹೆಚ್ಚಾಗಿದೆ. ರಷ್ಯಾದ ಪಡೆಗಳು ಉಕ್ರೇನ್‌ ಆಕ್ರಮಣ ತಡೆಯಲು ಹೆಣಗಾಡುತ್ತಿರುವ ಕರ್ಸ್ಕ್ ಪ್ರದೇಶಕ್ಕೆ ಉತ್ತರ ಕೊರಿಯಾದ ಕೆಲವು ಪಡೆಗಳು ತೆರಳಿವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ತಿಳಿಸಿದ್ದಾರೆ.

            ಅಮೆರಿಕ ಅಂದಾಜಿನ ಪ್ರಕಾರ ಉತ್ತರ ಕೊರಿಯಾದ 10,000 ಪಡೆಗಳು ರಷ್ಯಾದಲ್ಲಿವೆ.

ಉತ್ತರ ಕೊರಿಯಾದ ಯೋಧರಿಗೆ ರಷ್ಯಾ ಫಿರಂಗಿ, ಡ್ರೋನ್‌ ಸೇರಿದಂತೆ ಅಗತ್ಯ ಕಾರ್ಯಾಚರಣೆಗಳ ತರಬೇತಿ ನೀಡುತ್ತಿದೆ. ಇದು ಪೂರ್ಣ ಪ್ರಮಾಣದಲ್ಲಿ ಯುದ್ಧ ಕಾರ್ಯಾಚರಣೆಯಲ್ಲಿ ಅವರನ್ನು ತೊಡಗಿಸಿಕೊಳ್ಳಲು ರಷ್ಯಾ ಸಜ್ಜಾಗಿರುವುದನ್ನು ತೋರುತ್ತದೆ ಎಂದು ಅಮೆರಿಕ ಅಧಿಕಾರಿ ಬ್ಲಿಂಕೆನ್‌ ತಿಳಿಸಿದ್ದಾರೆ.

           ರಷ್ಯಾದೊಂದಿಗೆ ಉತ್ತರ ಕೊರಿಯಾ ಆಪ್ತವಾಗುತ್ತಿರುವುದು ವಿಶ್ವದಾದ್ಯಂತ ಕಳವಳಕ್ಕೆ ಕಾರಣವಾಗಿದೆ. ಇದು ಯುದ್ಧ ಯಾವ ಮಟ್ಟಕ್ಕೆ ಹೋಗಬಹುದು ಹಾಗೂ ಉತ್ತರ ಕೊರಿಯಾದ ನೆರವಿಗೆ ರಷ್ಯಾ ಯಾವ ರೀತಿಯ ಸೇನಾ ನೆರವು ನೀಡಬಹುದು ಎಂಬ ಭೀತಿ ಹುಟ್ಟಿಸಿದೆ.

         ಅಮೆರಿಕ ಮತ್ತು ದಕ್ಷಿಣ ಕೊರಿಯಾದ ನಾಯಕರು ಕಳೆದ ವಾರ ಸಭೆ ಸೇರಿದ್ದಾಗ ಇದೇ ಪ್ರಮುಖ ವಿಷಯವಾಗಿತ್ತು. ಈ ಹೊಸ ಬೆಳವಣಿಯಿಂದ ಏಷ್ಯಾ-ಪೆಸಿಫಿಕ್‌ನಲ್ಲಿ ಅಸ್ಥಿರತೆ ಉಂಟಾಗಲಿದ್ದು, ಯುದ್ಧ ವಿಸ್ತರಣೆಯಾಗುವ ಕಳವಳದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ.

        ಉತ್ತರ ಕೊರಿಯಾದ ಈ ನಡೆ ಯುರೋಪ್‌ ಖಂಡ ಹಾಗೂ ಕೊರಿಯಾ ಪ್ರದೇಶವನ್ನು ಆತಂಕಕ್ಕೆ ಸಿಲುಕಿಸಿದೆ. ಈ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವುದಾಗಿ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚೋ ಟೇ-ಯುಲ್ ತಿಳಿಸಿದ್ದಾರೆ.

           ಉತ್ತರ ಕೊರಿಯಾ ನೆರವಿಗೆ ಪ್ರತಿಯಾಗಿ ರಷ್ಯಾ ಯಾವ ರೀತಿಯ ಸೇನಾ ತಂತ್ರಜ್ಞಾನ ಒದಗಿಸಲಿದೆ. ಈ ನಡೆ ಯುದ್ಧಕ್ಕೆ ಇತರೆ ರಾಷ್ಟ್ರಗಳು ತಮ್ಮ ಸೇನಾಪಡೆಗಳನ್ನು ಕಳುಹಿಸಲು ದಾರಿಮಾಡಿಕೊಡಲಿದೆಯೇ ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.

                ಇದಲ್ಲದೇ ಗುರುವಾರ ಅಮೆರಿಕ ಮೇಲೆ ದಾಳಿ ಮಾಡಬಲ್ಲ ಖಂಡಾಂತರ ಕ್ಷಿಪಣಿಯ ಪ್ರಯೋಗವನ್ನೂ ಉತ್ತರ ಕೊರಿಯಾ ಮಾಡಿದೆ. ಕೆಲವರ ಪ್ರಕಾರ ರಷ್ಯಾ ಉತ್ತರ ಕೊರಿಯಾಗೆ ಕ್ಷಿಪಣಿ ತಂತ್ರಜ್ಞಾನ ನೆರವು ನೀಡಿರುವ ಶಂಕೆಯಿದೆ.

              ಗುರುವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿರುವ ರಾಬರ್ಟ್‌ ವುಡ್‌ ಮಾತನಾಡಿ, 'ರಷ್ಯಾದಲ್ಲಿ ಉತ್ತರ ಕೊರಿಯಾದ ಪಡೆಗಳು ಇಲ್ಲ ಎಂಬುದನ್ನು ರಷ್ಯಾ ಇನ್ನೂ ಪ್ರತಿಪಾದಿಸುತ್ತದೆಯೇ?' ಎಂದು ರಷ್ಯಾ ಸಹವರ್ತಿಗೆ ಪ್ರಶ್ನಿಸಿದ್ದರು. ಸಭೆಯಲ್ಲಿದ್ದ ರಷ್ಯಾದ ಪ್ರತಿನಿಧಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಉತ್ತರ ಕೊರಿಯಾವು ಈ ತಿಂಗಳ ಮುಂಚೆಯೇ ರಷ್ಯಾಗೆ ಯುದ್ಧ ಸಾಮಗ್ರಿಯನ್ನು ಕಳುಹಿಸಿದೆ. ಈ ಬಗ್ಗೆ ಶ್ವೇತ ಭವನವು ಚಿತ್ರ ಬಿಡುಗಡೆ ಮಾಡಿದ್ದು, ರೈಲಿನಲ್ಲಿ ಸಾವಿರ ಕಂಟೇನರ್‌ಗಳ ಮೂಲಕ ಯುದ್ಧ ಸಾಮಗ್ರಿ ಕಳುಹಿಸಿದೆ ಎಂದು ತಿಳಿಸಿದೆ.

'ಗೆಲ್ಲುವವರೆಗೂ ನಾವು ರಷ್ಯಾ ಪರ ಇರಲಿದ್ದೇವೆ'

          ಮಾಸ್ಕೊ: 'ಉಕ್ರೇನ್‌ ಯುದ್ಧದಲ್ಲಿ ರಷ್ಯಾ ಗೆಲ್ಲುವವರೆಗೂ ಆ ರಾಷ್ಟ್ರದ ಪರ ನಾವು ನಿಲ್ಲುತ್ತೇವೆ' ಎಂದು ಉತ್ತರ ಕೊರಿಯಾದ ವಿದೇಶಾಂಗ ಸಚಿವೆ ಚೋ ಸೋನ್ ಹುಯಿ ತಿಳಿಸಿದ್ದಾರೆ.

            ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಜತೆ ಸಭೆಯಲ್ಲಿ ಭಾಗವಹಿಸಿದ್ದ ಅವರು 'ಅಮೆರಿಕ ಹಾಗೂ ದಕ್ಷಿಣ ಕೊರಿಯಾ ನಮ್ಮ ದೇಶದ ಮೇಲೆ ಪರಮಾಣು ದಾಳಿ ಮಾಡಲು ಸಂಚು ರೂಪಿಸಿವೆ' ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪಕ್ಕೆ ಯಾವುದೇ ಪುರಾವೆ ನೀಡಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries