ಕಾಸರಗೋಡು: ಕೇರಳ ಸಹಕಾರಿ ಕ್ಷೇತ್ರದಲ್ಲಿ ಸಮಾಜವಾದಿ ವಿಚಾರಗಳನ್ನು ಉತ್ತೇಜಿಸಲು ಕೆಲಸ ಮಾಡುವ ಸಹಕಾರಿ ನೌಕರರ ಸಂಘಟನೆ ಕೇರಳ ಕೋಆಪರೇಟಿವ್ ಎಂಪ್ಲಾಯಿಸ್ ಸೆಂಟರ್(ಕೆಸಿಇಸಿ)ನ ರಾಜ್ಯ ಸಮ್ಮೇಳನ ನ. 9ಹಾಗೂ 10ರಂದು ತ್ರಿಕರಿಪುರದ ಪಿಆರ್ ಕುರುಪ್ ನಗರದಲ್ಲಿ ನಡೆಯಲಿರುವುದಾಗಿ ಸಂಘಟನೆ ರಾಜ್ಯ ಸಮಿತಿ ಅಧ್ಯಕ್ಷ ಸಿ. ಸುಜಿತ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರಿ ನೌಕರರಿಗೆ ಹಾಗೂ ಸಹಕಾರಿ ಕ್ಷೇತ್ರಕ್ಕೆ ಧಕ್ಕೆ ತರುವಂತಹ ಹಲವು ಕಾನೂನುಗಳನ್ನು ಜಾರಿಮಾಡುತ್ತಿರುವ ಕಾಲಘಟ್ಟದಲ್ಲಿ ರಾಜ್ಯ ಸಮ್ಮೇಳನ ನಡೆಸಲಾಗುತ್ತಿದ್ದು, ಈ ಬಗ್ಗೆ ಪರಾಮರ್ಶೆ ನಡೆಸಲಾಗುವುದು. 9ರಂದು ಮಧ್ಯಾಹ್ನ 2ಗಂಟೆಗೆ ಸಮ್ಮೆಳನ ನಗರದಲ್ಲಿ ಸಿ. ಸುಜಿತ್ ಧ್ವಜಾರೋಹಣ ನಡೆಸುವರು. ನಂತರ ನಡೆಯುವ ಪ್ರತಿನಿಧಿ ಸಭೆಯನ್ನು ಮಾಜಿ ಸಂಸದ, ಆರ್‍ಜೆಡಿ ರಾಜ್ಯಾಧ್ಯಕ್ಷ ಎಂ.ವಿ ಶ್ರೇಯಾಂಶ್ ಕುಮಾರ್ ಉದ್ಘಾಟಿಸುವರು. ಸಮಿತಿ ಅಧ್ಯಕ್ಷ ವಿ.ವಿ.ಕೃಷ್ಣನ್ ಪ್ರಧಾನ ಭಾಷಣ ಮಾಡುವರು.
'ಬದಲಾಗುತ್ತಿರುವ ವಿಶ್ವ ಆರ್ಥಿಕ ವ್ಯವಸ್ಥೆ ಮತ್ತು ಸಹಕಾರ ಚಳವಳಿ' ಕುರಿತು ಚರ್ಚಾ ತರಗತಿಯನ್ನು ವಡಕರ ವೃತ್ತದ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಮನಯತ್ ಚಂದ್ರನ್ ಉದ್ಘಾಟಿಸುವರು. ನವೆಂಬರ್ 10 ಬೆಳಿಗ್ಗೆ 9 ಕ್ಕೆ ಪ್ರಬಂಧ ಮಂಡನೆ, ಸಂಘಟನಾ ಚರ್ಚೆ, ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ನಡೆಯುವುದು. ಶಾಸಕ, ಮಾಜಿ ಸಚಿವ ಕೆ.ಪಿಮೋಹನನ್ ಉದ್ಘಾಟಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ವಿ ವಿಜಯ್, ಇ.ವಿ ಗಣೇಶ£, ಸಿ.ವಿ . ಬಾಲಕೃಷ್ಣನ್, ಪ್ರಚಾರ ಸಮಿತಿ ಅಧ್ಯಕ್ಷ ಪಿ.ವಿ. ತಂಬಾನ್, ಕೆ.ಸಿ.ಇ.ಸಿ ರಾಜ್ಯ ಕಾರ್ಯದರ್ಶಿ ರವಿದಂದ್ರ ಕುಣನೋತ್, ಜಿಲ್ಲಾ ಅಧ್ಯಕ್ಷ ಕೆ. ಪವಿತ್ರನ್ ಉಪಸ್ಥಿತರಿದ್ದರು.