ಬದಿಯಡ್ಕ : ಗಂಗಾಧರ ಆಳ್ವ ಸಾಂಸ್ಕøತಿಕ ಪ್ರತಿಷ್ಠಾನ ವಳಮಲೆ ಬದಿಯಡ್ಕ ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಬದಿಯಡ್ಕದ ವಳಮಲೆ ಇರಾ ಸಭಾ ಭವನದಲ್ಲಿ ನಡೆಯಿತು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಗಂಗಾಧರ ಆಳ್ವ ಪ್ರತಿಷ್ಠಾನವು ಕನ್ನಡದಲ್ಲಿ ಸೇವೆ ಮಾಡಿದ ವಿವಿಧ ಕ್ಷೇತ್ರದ ಮಹನೀಯರನ್ನು ಗುರುತಿಸಿ ಪ್ರತಿμÁ್ಠನದ ಮೂಲಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದ್ದಲ್ಲದೆ ಅವರ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ.ನಮ್ಮ ಮಾತೃ ಭಾಷೆಗೆ ಕುತ್ತು ಬಂದಲ್ಲಿ ನಾವು ಎದ್ದೇಳಬೇಕು. ತಾಯಿಯ ಪ್ರೇಮ, ಭಾಷೆಯ ಭಕ್ತಿ ಯಾವಾಗಲೂ ನಮ್ಮಲ್ಲಿರಬೇಕು. ಬಹಳಷ್ಟು ಜನ ಕನ್ನಡ ಅಭಿಮಾನಿಗಳು ಕಾಸರಗೋಡಿನಲ್ಲಿ ಇದ್ದು ನಿರಂತರ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಗಂಗಾಧರ ಆಳ್ವರ ಸಾಧನೆ, ಯಶಸ್ಸು ಮತ್ತು ಮುಂಬೈ ನಗರದಲ್ಲಿ ಪತ್ರಕರ್ತರಾಗಿ ದುಡಿದಂತಹ ಅವರ ಅನುಭವ ಇದೆಲ್ಲವೂ ಶ್ಲಾಘನೀಯ. ಇಂಥಹ ಹಿರಿಯರ ಅನುಭವದಿಯಲ್ಲಿ ಕಾರ್ಯಕ್ರಮಗಳು ಯಶಸ್ಸು ಕಾಣುತ್ತವೆ. 5 ಜನರಿಗೆ ಪ್ರಶಸ್ತಿ ಪ್ರದಾನ ಪ್ರತಿμÁ್ಠನದಿಂದ ಆದದ್ದು ತುಂಬ ಶ್ಲಾಘನೀಯ ಎಂದರು.
ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕøತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದರ ಅರಿವು ಮೂಡಿಸಲು ಈ ಗಡಿನಾಡಿನಲ್ಲೂ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಜೊತೆಗೆ ಕನ್ನಡಕ್ಕೆ ಸೇವೆ ಕೊಟ್ಟ ಮಹನೀಯರನ್ನು ಗುರುತಿಸಲಾಗುತ್ತಿದೆ ಎಂದರು.
ಸಾಮಾಜಿಕ ಮುಖಂಡರಾದ ಕಲ್ಲಗ ಚಂದ್ರಶೇಖರ ರಾವ್ ರಾಜ್ಯೋತ್ಸವ ಸಂದೇಶ ನೀಡಿ ಮಾತನಾಡಿ ರಾಜ್ಯೋತ್ಸವ ಆಚರಣೆಯಲ್ಲಿ ನಮ್ಮೆಲ್ಲರ ಪಾತ್ರ ಮಹತ್ವದ್ದು. ನಾಡು- ನುಡಿ, ಸಂಪತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಅದನ್ನರಿತು ಗಂಗಾಧರ ಆಳ್ವರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯ್ಯಕಟ್ಟೆ, ಸಾಮಾಜಿಕ ಕಾರ್ಯಕರ್ತ ಜಯದೇವ ಖಂಡಿಗೆ ಮುಂತಾದವರು ಶುಭಹಾರೈಸಿದರು.
ತಾರಾನಾಥ ರೈ, ಸಮಾಜ ಸೇವಕ ಪ್ರತೀಕ್ ಆಳ್ವ, ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿμÁ್ಠನದ ಕೋಶಾಧಿಕಾರಿ ರಮೇಶ್ ಶೆಟ್ಟಿ ಗೌರೀಕ್ಕೋಡಿ, ಪ್ರೊ.ಎ.. ಶ್ರೀನಾಥ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಗಂಗಾಧರ ಬಲ್ಲಾಳ್ ಅಡ್ವಳ , ಸಾಮಾಜಿಕ ಕಾರ್ಯಕರ್ತೆ ಆಯಿಷಾ ಎ.ಎ. ಪೆರ್ಲ, ಜನಪ್ರಿಯ ವೈದ್ಯ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಯುವ ಸಂಘಟಕ ಅಶ್ವತ್ಥ್ ಪೂಜಾರಿ ಲಾಲ್ ಭಾಗ್ ಪೈವಳಿಕೆ, ಯೋಗ ಶಿಕ್ಷಕಿ ತೇಜಕುಮಾರಿ ಎಂಬಿವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಪರಮೇಶ್ವರ ನಾಯ್ಕ್ ಅರ್ತಲೆ ಅವರ 12 ನೇ ಕೃತಿಯಾದ ಸ್ನೇಹಾಮೃತವನ್ನು ನಿವೃತ್ತ ಬ್ಯಾಂಕ್ ಪ್ರಬಂಧಕ ಟಿ. ಸುಬ್ರಾಯ ನಾಯ್ಕ್ ಬಿಡುಗಡೆಗೊಳಿಸಿದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕÀ ಗೋಪಾಲಕೃಷ್ಣ ವಂದಿಸಿದರು. ಕೃಷ್ಣ ಡಿ ಬೆಳಿಂಜ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸ್ನೇಹಾಮೃತ ಕೃತಿಯ ಕೃತಿಕಾರರಾದ ಪರಮೇಶ್ವರ ನಾಯ್ಕ್ ಅರ್ತಲೆ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿμÁ್ಠನದ ಮಹಿಳಾ ಘಟಕದ ಉದ್ಘಾಟನೆಯ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಜನ್ಯ ಪ್ರವೀಣ್ ನೆಕ್ರಾಜೆ ಅವರಿಂದ ನೃತ್ಯ , ಜ್ಞಾನೇಶ್ವರಿ ಬಂಟರ ಬಳಗ ಬದಿಯಡ್ಕ ವತಿಯಿಂದ ಕನ್ನಡ ಗಾನಯಾನ ಮತ್ತು ಯೋಗ ಫಾರ್ ಕಿಡ್ಸ್ ಕಾಸರಗೋಡು ಸಂಸ್ಥೆ ವತಿಯಿಂದ ಯೋಗ ಪ್ರದರ್ಶನ, ಗೀತ ಭಟ್ ಅವರಿಂದ ಕನ್ನಡ ಗಾಯನವು ನಡೆಯಿತು.