HEALTH TIPS

ನಿಮ್ಮ Android ಫೋನ್‌ನಲ್ಲಿ Factory Reset ಮಾಡುವುದು ಹೇಗೆ?: ಈ ಟಿಪ್ಸ್ ಬಳಸಿ

 ಎಲ್ಲರ ಕೈಯಲ್ಲಿ Android ಮೊಬೈಲ್‌ ಇದ್ದೇ ಇರುತ್ತದೆ. ಮೊದಲ ಬಾರಿಗೆ ನಿಮ್ಮ ಸ್ಮಾರ್ಟ್‌ಫೋನ್‌ (Smartphone) ಆನ್ ಮಾಡಿದಾಗ ನಿಮ್ಮ ಉತ್ಸಾಹ ಹೇಗಿತ್ತು ನೆನಪಿದೆಯೇ? ಈಗ ನಿಮ್ಮ ಮೊಬೈಲ್‌ಗೆ ವಯಸ್ಸಾಗಿದೆಯೇ? ಸ್ಪೀಡ್‌ ಆಗಿ ವರ್ಕ್ ಆಗುತ್ತಿಲ್ಲವೇ? ಮೊದಲಿನಂತೆ ನಿಮ್ಮ ಹಳೆಯ ಮೊಬೈಲ್‌ (Mobile) ಅನ್ನು ಮರುಪಡೆಯುವುದು ಕನಸಿನ ಮಾತೇ ಸರಿ. ಆದರೂ, Factory Reset (ಫ್ಯಾಕರಿ ರೀಸೆಟ್) ಮಾಡುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಹೊಸದರಂತೆ ಮಾಡಬಹುದು. ನಾವು ತಿಳಿಸುವ ಸುಲಭ ಟಿಪ್ಸ್‌ ಫಾಲೋ ಮಾಡಿದ್ರೆ, ನಿಮ್ಮ ಹಳೆಯ ಫೋನ್ ಹೊಚ್ಚ ಹೊಸ ರೀತಿಯಲ್ಲಿ ಕೆಲಸ ಮಾಡಲು ಶುರುಮಾಡುತ್ತದೆ.

ಸಾಮಾನ್ಯವಾಗಿ ಮೊಬೈಲ್‌ ಹಳೆಯದಾದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿಮ್ಮ ಸ್ಮಾರ್ಟ್‌ಫೋನ್ ಎಷ್ಟೇ ಹೊಳೆಯುತ್ತಿದ್ದರೂ ಅಗತ್ಯವಿದ್ದಾಗ ಸರಿಯಾಗಿ ವರ್ಕ್‌ ಆಗದಿದ್ದರೆ, ಹ್ಯಾಂಗ್ ಆಗುತ್ತಿದ್ದರೆ ಕೆಟ್ಟ ಕೋಪ ಬರುತ್ತದೆ. ಹೀಗಾಗಿ, ನೀವು ಮೊಬೈಲ್‌ ಬಗ್ಗೆ ಎಚ್ಚರದಿಂದಿರಬೇಕು. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗೆ ವಯಸ್ಸಾದಂತೆ ವಿಶೇಷ ಕಾಳಜಿ ಬೇಕಾಗುತ್ತದೆ. ನಾವು ತಿಳಿಸುವ Factory Reset ಬಗ್ಗೆ ಗಮನಹರಿಸಿದರೆ, ನಿಮ್ಮ ಹಳೆಯ ಫೋನ್ ಮೊದಲಿನಂತೆ ಮಾರ್ಪಾಡಾಗುತ್ತದೆ. ತುಂಬಾ ಸ್ಫೀಡ್‌ ಆಗಿ ವರ್ಕ್ ಆಗುತ್ತದೆ.


ಫ್ಯಾಕ್ಟರಿ ರೀಸೆಟ್‌ನಿಂದ ಲಾಭವೇನು?

ನಿಮ್ಮ ಮೊಬೈಲ್‌ ಅನ್ನು ಮೊದಲಿನಂತೆ ಮಾಡುವುದಕ್ಕೆ Factory Reset ಎಂದು ಕರೆಯಲಾಗುತ್ತದೆ. ಇದರಿಂದ ನೀವು ಹೊಸ ಮೊಬೈಲ್‌ ಖರೀದಿಸುವುದು ತಪ್ಪುತ್ತದೆ. ಇದು ನಿಮ್ಮ Android ಮೊಬೈಲ್‌ ಅನ್ನು ಪರಿಣಾಮಕಾರಿಯಾಗಿ ಅಳಿಸಿಹಾಕುತ್ತದೆ. ಅನಗತ್ಯ ಅಪ್ಲಿಕೇಶನ್‌ಗಳು, ಮಾಲ್‌ವೇರ್‌ಗಳನ್ನು ತೆಗೆದುಹಾಕುತ್ತದೆ. ಮೌಲ್ಯಯುತ ಸ್ಟೋರೇಜ್‌ ಪ್ಲೇಸ್‌ ಅನ್ನು ಕ್ಲೀನ್‌ ಮಾಡುತ್ತದೆ. ಈ ಪ್ರಕ್ರಿಯೆಯು ನಿಮ್ಮ ಫೋನ್‌ ಅನ್ನು ಹೊಸದರಂತೆ ಮಾಡುವುದರ ಜೊತೆಗೆ, ನೀವು ಬೇರೆಯವರಿಗೆ ಉತ್ತಮ ಬೆಲೆಗೆ ಮಾರಾಟ ಮಾಡಬಹುದು ಅಥವಾ ಬೇರೆಯವರಿಗೆ ಬಳಸಲು ನೀಡಬಹುದು.

ಫ್ಯಾಕ್ಟರಿ ರೀಸೆಟ್ ಮಾಡುವುದು ಹೇಗೆ?

ಅನೇಕ ಬಾರಿ ನೀವು ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅನ್ನು ದೀರ್ಘಕಾಲದವರೆಗೆ ಅಪ್ಡೇಟ್ ಕೊಟ್ಟೇ ಇರುವುದಿಲ್ಲ. ಇದರಿಂದ ಮೊಬೈಲ್‌ ನಿಧಾನವಾಗಿ ಕೆಲಸ ಮಾಡುತ್ತದೆ. ಆಗ ಮೊಬೈಲ್‌ನ ಸೆಟ್ಟಿಂಗ್‌ಗಳ ಮೂಲಕ Factory Reset ಮಾಡಬಹುದು. ಈ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು, ನಿಮ್ಮ ಡೇಟಾವನ್ನು ನೀವು ಬ್ಯಾಕಪ್ ಮಾಡಿದ್ದೀರಾ? ಮತ್ತು ನಿಮ್ಮ ಮೊಬೈಲ್‌ ಇದಕ್ಕೆ ಬೇಕಾದಷ್ಟು ಬ್ಯಾಟರಿ ಬ್ಯಾಕಪ್‌ ಅನ್ನು ಹೊಂದಿದೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಿ. ಬಳಿಕ, ಈ ಕೆಳಗಿನ ವಿಧಾನಗಳನ್ನು ಫಾಲೋ ಮಾಡಿ.

  • ಮೊದಲು ನಿಮ್ಮ ಮೊಬೈಲ್‌ ಅನ್ನು ಆನ್‌ ಮಾಡಿ.
  • ಸೆಟ್ಟಿಂಗ್‌ಗಳ ಅಪ್ಲಿಕೇಶನ್ ಓಪನ್ ಮಾಡಿ ಮತ್ತು ಸಿಸ್ಟಮ್ ಆಪ್ಷನ್ ನ್ಯಾವಿಗೇಟ್ ಮಾಡಿ.
  • ಭಳಿಕ, Factory Reset (Reset option) ಆಪ್ಷನ್ ಕಾಣುವ ವರೆಗೆ ಕೆಳಗೆ ಸ್ಕ್ರಾಲ್ ಮಾಡಿ, ನಂತರ ಅದರ ಮೇಲೆ ಟ್ಯಾಪ್ ಮಾಡಿ.
  • ಬಳಿಕ 'Erase all data' ಅಥವಾ 'Factory reset' ಆಪ್ಷನ್ ಆಯ್ಕೆ ಮಾಡಿ.
  • ಸುರಕ್ಷತಾ ಉದ್ದೇಶಗಳಿಗಾಗಿ ಪ್ರಾಂಪ್ಟ್ ಮಾಡಿದರೆ ನಿಮ್ಮ ಡಿವೈಸ್‌ ಪಿನ್ ನಮೂದಿಸಿ.
  • ಪ್ರಕ್ರಿಯೆಯನ್ನು ದೃಢಪಡಿಸಿ ಮತ್ತು ಫ್ಯಾಕ್ಟರಿ ರೀಸೆಟ್ (Reset option) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕನ್ಫರ್ಮ್‌ ಮಾಡಿ.

ರಿಕವರಿ ಮೋಡ್ ಮೂಲಕ ಫ್ಯಾಕ್ಟರಿ ರೀಸೆಟ್ ಮಾಡುವುದು ಹೇಗೆ?

ಸಾಫ್ಟ್‌ವೇರ್ ಸಮಸ್ಯೆಗಳಿಂದಾಗಿ ಮೊಬೈಲ್‌ನಲ್ಲಿ ಸೆಟ್ಟಿಂಗ್‌ಗಳಿಂದ ಕೆಲವೊಮ್ಮೆ Factory Reset ಪ್ರಕ್ರಿಯೆ ಸಾಧ್ಯವಾಗದಿರಬಹುದು. ಆ ಸಂದರ್ಭಗಳಲ್ಲಿ ನೀವು ಗೊಂದಲಕ್ಕೆ ಒಳಗಾಗಬೇಡಿ. ಈ ವೇಳೆ ನೀವು, ರಿಕವರಿ ಮೋಡ್ ಬಳಸಿ ಫ್ಯಾಕ್ಟರಿ ರೀಸೆಟ್ (Factory Reset) ಮಾಡಬಹುದು. ಅದು ಹೇಗೆ ಎಂಬುದು ಇಲ್ಲಿದೆ. ಮುಂದೆ ಓದಿ.

  • ನಿಮ್ಮ ಮೊಬೈಲ್‌ ಅನ್ನು ಸ್ವಿಚ್ಆಫ್ ಮಾಡಿ.
  • ರಿಕವರಿ ಮೋಡ್‌ಗೆ ಬೂಟ್ ಮಾಡಲು ಏಕಕಾಲಕ್ಕೆ ಪವರ್ ಮತ್ತು ವಾಲ್ಯೂಮ್ ಡೌನ್ ಬಟನ್‌ಗಳನ್ನು ಒತ್ತಿ ಮತ್ತು ಹಿಡಿದುಕೊಳ್ಳಿ.
  • ವಾಲ್ಯೂಮ್ ಬಟನ್‌ಗಳನ್ನು ಬಳಸಿಕೊಂಡು ಭಾಷೆಯನ್ನು ಆಯ್ಕೆಮಾಡಿ ಮತ್ತು ಪವರ್ ಬಟನ್‌ನೊಂದಿಗೆ ಖಚಿತಪಡಿಸಿ.
  • ಬಳಿಕ 'Wipe data' ಆಯ್ಕೆಯನ್ನು ಹುಡುಕಿ ಮತ್ತು 'Format data' ಆಯ್ಕೆ ಮಾಡಲು ಮುಂದುವರಿಯಿರಿ.
  • ಪ್ರಾಂಪ್ಟ್ ಮಾಡಿದರೆ ವೆರಿಫಿಕೇಶನ್ ಕೋಡ್ ನಮೂದಿಸಿ ಮತ್ತು Format data ಪ್ರಕ್ರಿಯೆಯನ್ನು ಖಚಿತಪಡಿಸಿ.
  • ಹೀಗೆ(Factory Reset) ಮಾಡಿದರೆ ನಿಮ್ಮ ಮೊಬೈಲ್‌ ಹೊಚ್ಚ ಹೊಸದರಂತೆ ಕೆಲಸ ಮಾಡುತ್ತದೆ.

ಫ್ಯಾಕ್ಟರಿ ರೀಸೆಟ್ ಮಾಡುವಾಗ ಹುಷಾರ್!

ನಿಮ್ಮ Android ಮೊಬೈಲ್‌ನಲ್ಲಿ Factory Reset ಮಾಡುವುದು ಸರಳ ಪ್ರಕ್ರಿಯೆಯಾಗಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ಗೆ ಹೊಸ ಜೀವ ಬರುತ್ತದೆ. ನೀವು ನಿಮ್ಮ ಮೊಬೈಲ್‌ ಅನ್ನು ಡಿಕ್ಲಟರ್ ಮಾಡಲು, ಸಾಫ್ಟ್‌ವೇರ್ ಸಮಸ್ಯೆಗಳನ್ನು ನಿವಾರಿಸಲು ಅಥವಾ ಮರುಮಾರಾಟ ಮಾಡಲು ಬಯಸಿದರೆ, ಈ ಟಿಪ್ಸ್ ಬಳಸುವುದು ಉತ್ತಮ. ಇದರ ಜೊತೆಯಲ್ಲಿ ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡುವುದನ್ನು ಮರೆಯಬೇಡಿ. ಜೊತೆಗೆ, ನಿಮ್ಮ Android ಮೊಬೈಲ್‌ನಲ್ಲಿ ಈ ರೀತಿ ಹೊಸ ಪ್ರಕ್ರಿಯೆ ಮಾಡುವಾಗ ಟಿಪ್ಸ್‌ಗಳನ್ನು ಎಚ್ಚರಿಕೆಯಿಂದ ಅನುಸರಿಸಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries