ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ವಾಯು ಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದೆ. ಭಾರತದಲ್ಲಿ ದೀಪಾವಳಿಯಂದು ಸಿಡಿಸುವ ಪಟಾಕಿಗಳೇ ವಾಯುಮಾಲಿನ್ಯ(Air Pollution)ಕ್ಕೆ ಕಾರಣವೆಂದು ಹೇಳಲಾಗುತ್ತದೆ. ಆದರೆ ಭಾರತದ ಹೊರತಾಗಿ ಗಾಳಿಯ ಗುಣಮಟ್ಟ ಸೂಚ್ಯಂಕ ಅಂದರೆ AQI ಗಂಭೀರ ವರ್ಗಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದಿರುವ ಅನೇಕ ನಗರಗಳಿವೆ.
ಅತಿ ಹೆಚ್ಚು ವಾಯುಮಾಲಿನ್ಯ ಇರುವ ನಗರ ಪಾಕಿಸ್ತಾನದಲ್ಲಿದೆ. ಹೌದು ಪಾಕಿಸ್ತಾನದ ಲಾಹೋರ್ ನಗರದಲ್ಲಿ ಶನಿವಾರ(ನವೆಂಬರ್ 2) AQI ಮಟ್ಟವು 1900 ತಲುಪಿದೆ. ಐಕ್ಯೂ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ವಿಶ್ವದ ಅತ್ಯಂತ ಕಲುಷಿತ ನಗರಗಳ ಹೆಸರುಗಳನ್ನು ನೈಜ-ಸಮಯದ ಆಧಾರದ ಮೇಲೆ ಬಹಿರಂಗಪಡಿಸಲಾಗಿದೆ.
ಐಕ್ಯೂ ಏರ್ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿಶ್ವದ ಅತ್ಯಂತ ಕಲುಷಿತ ನಗರದ ಹೆಸರನ್ನು ನೈಜ-ಸಮಯದ ಆಧಾರದ ಮೇಲೆ ಬಹಿರಂಗಪಡಿಸಲಾಗಿದೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಅತ್ಯಧಿಕ ಪ್ರಮಾಣದ ಮಾಲಿನ್ಯ ಕಂಡುಬಂದಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಾಹೋರ್ ಆಡಳಿತವು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ ಹಾಗೂ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲು ಆದೇಶಗಳನ್ನು ಹೊರಡಿಸಿದೆ.
ಸರ್ಕಾರವು ಪ್ರಾಥಮಿಕ ಶಾಲೆಗಳನ್ನು ಒಂದು ವಾರ ಮುಚ್ಚಲು ಆದೇಶಿಸಿದೆ ಮತ್ತು ಎಲ್ಲಾ ಜನರಿಗೆ ಮಾಸ್ಕ್ ಧರಿಸಲು ಸಲಹೆ ನೀಡಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಈ ಮಾಹಿತಿ ನೀಡಿದರು. ಪಾಕಿಸ್ತಾನ ಸರ್ಕಾರವು ಲಾಹೋರ್ ನಗರದ ನಿವಾಸಿಗಳಿಗೆ ಮನೆಯೊಳಗೆ ಇರುವಂತೆ ಹಾಗೂ ಮನೆಯಲ್ಲಿನ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚುವಂತೆ ಸಲಹೆ ನೀಡಿದೆ. ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಜನರಿಗೆ ಮನವಿ ಮಾಡಲಾಗಿದೆ.
ಭಾರತದ ಮೇಲೆ ಪಾಕ್ ಆರೋಪ
ಪಾಕಿಸ್ತಾನ ಮತ್ತು ಪಂಜಾಬ್ ಸರ್ಕಾರವು ಲಾಹೋರ್‌ನಲ್ಲಿನ ವಾಯುಮಾಲಿನ್ಯಕ್ಕೆ ಭಾರತವನ್ನು ದೂಷಿಸಿದೆ. ಭಾರತದಿಂದ ಬರುವ ಗಾಳಿಯಿಂದಾಗಿ ಲಾಹೋರ್‌ನಲ್ಲಿ ವಾಯು ಮಾಲಿನ್ಯದ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದೆ. ಭಾರತದೊಂದಿಗೆ ಮಾತನಾಡದೆ ಮಾಲಿನ್ಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಸಿಎಂ ಮರ್ಯಮ್ ನವಾಜ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಮೂಲಕ ಭಾರತದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.