ನವದೆಹಲಿ: ಭಾರತೀಯ ರೈಲ್ವೆಯು ವಂದೇ ಭಾರತ್ ಎಕ್ಸ್ಪ್ರೆಸ್ನ ರೈಲಿನ ಅತಿ ದೂರದ ಸಂಚಾರಕ್ಕೆ ಬುಧವಾರ ಚಾಲನೆ ನೀಡಿದೆ.
ನವದೆಹಲಿ: ಭಾರತೀಯ ರೈಲ್ವೆಯು ವಂದೇ ಭಾರತ್ ಎಕ್ಸ್ಪ್ರೆಸ್ನ ರೈಲಿನ ಅತಿ ದೂರದ ಸಂಚಾರಕ್ಕೆ ಬುಧವಾರ ಚಾಲನೆ ನೀಡಿದೆ.
ದೀಪಾವಳಿ ಮತ್ತು ಛತ್ ಪೂಜೆಯ ಕಾರಣ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ರೈಲ್ವೆ ಇಲಾಖೆಯು ದೆಹಲಿಯಿಂದ ಪಟ್ನಾಕ್ಕೆ ವಿಶೇಷ ರೈಲು ಸಂಚಾರವನ್ನು ಪ್ರಾರಂಭ ಮಾಡಿದೆ.
'ಪ್ರಾಯೋಗಿಕವಾಗಿ ಸಂಚಾರ ಆರಂಭಿಸಿರುವ ಈ ರೈಲು 11.35 ಗಂಟೆಗಳಲ್ಲಿ 994 ಕಿ.ಮೀ ಸಂಚರಿಸಲಿದೆ. ಈ ರೈಲು ಪ್ರಮುಖ ಸ್ಥಳಗಳಾದ ಆರಾ, ಬಕ್ಸರ್, ದೀನ್ದಯಾಳ್ ಉಪಾಧ್ಯಾಯ ನಿಲ್ದಾಣ ಪ್ರಯಾಗ್ರಾಜ್ ಮತ್ತು ಕಾನ್ಪುರದಲ್ಲಿ ನಿಲುಗಡೆಯಾಗಲಿದೆ' ಎಂದು ರೈಲ್ವೆ ಸಚಿವಾಲಯ ದೃಢಪಡಿಸಿದೆ.
ನೂತನ ವಂದೇ ಭಾರತ್ ಎಕ್ಸ್ಪ್ರೆಸ್ ಬುಧವಾರ, ಶುಕ್ರವಾರ ಮತ್ತು ಭಾನುವಾರ ದೆಹಲಿಯಿಂದ ಪಟ್ನಾಕ್ಕೆ ಸಂಚರಿಸಲಿದೆ. ಸೋಮವಾರ, ಗುರುವಾರ ಮತ್ತು ಶನಿವಾರ ಪಟ್ನಾದಿಂದ ದೆಹಲಿಗೆ ಸಂಚರಿಸಲಿದೆ.