ಮಂಜೇಶ್ವರ: ಸಂತಡ್ಕ ಶ್ರೀ ಕ್ಷೇತ್ರ ಅರಸು ಸಂಕಲ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಜನವರಿ 19ರಿಂದ 24ರ ವರೆಗೆ ಜರುಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಅಧ್ಯಕ್ಷÀ ಡಾ. ಶ್ರೀಧರ ಭಟ್ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಉದ್ಯಾವರ ಅರಸು ಮಂಜಿಷ್ಣಾರ್ ಮಾಡದ ರಾಜ ಬೆಳ್ಚಪ್ಪಾಡರು, ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಸಂತ ಭಟ್ ತೊಟ್ಟೆತ್ತೋಡಿ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಗುರು ಸ್ವಾಮಿಗಳಾದ ಸಂಜೀವ ಶೆಟ್ಟಿ ಮಾಡ, ಸುಣ್ಣಾರ ಬೀಡು ಕ್ಷೇತ್ರ ರಾಮಚಂದ್ರ ಪೂಜಾರಿ ಸುಣ್ಣಾರ, ಪ್ರದೀಪ್ ಮಾಸ್ತರ್ ಸುಣ್ಣಾರ ಬೀಡು, ದಿನೇಶ್ ಪೂಂಜಾ ಕುಳೂರು,ನಾರಾಯಣ ರಾವ್ ಎಂ.ಜಿ, ಬಾಲಕೃಷ್ಣ ಭಂಡಾರಿ ದಡ್ಡoಗಡಿ, ಪಂಚಾಯತಿ ಸದಸ್ಯರಾದ ಬಾಬು ಸಿ, ಕೃಷ್ಣ ಶೆಟ್ಟಿ ಕಲ್ಲಾಯಿ, ಐತಪ್ಪ ಶೆಟ್ಟಿಗಾರ್ ನೀರಹಳ್ಳಿ, ಸಾಹಿತ್ ಶೆಟ್ಟಿ ಮಾನೂರು ಮೊದಲಾದ ಅತಿಥಿಗಳು, ಪದಾಧಿಕಾರಿಗಳು, ಮಾತೃ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು. ಉಪಾಧ್ಯಕ್ಷ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.