HEALTH TIPS

ಅಯೋಧ್ಯೆ | ಅಶುದ್ಧರಾದರೆ ರಾಮಮಂದಿರ ಪ್ರವೇಶವಿಲ್ಲ, ಆಯಂಡ್ರಾಯ್ಡ್ ಫೋನ್ ನಿಷಿದ್ಧ

ಅಯೋಧ್ಯೆ: 'ಕುಟುಂಬದಲ್ಲಿ ಜನನ, ಮರಣದಿಂದಾಗಿ ಅಶುದ್ಧರಾದರೆ ಅಂಥ ಪೂಜಾರಿಗಳಿಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಪ್ರವೇಶವಿಲ್ಲ' ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅನಿಲ್ ಮಿಶ್ರಾ ಶುಕ್ರವಾರ ತಿಳಿಸಿದ್ದಾರೆ.

'ರಾಮ ಮಂದಿರದ ಪೂಜಾ ಕೈಂಕರ್ಯಗಳಿಗೆ ಕಳೆದ ಆರು ತಿಂಗಳಿಂದ ತರಬೇತಿ ಪಡೆದ ಪೂಜಾರಿಗಳನ್ನು ಶೀಘ್ರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುವುದು.

ನೂತನವಾಗಿ ನಿಯೋಜನೆಗೊಳ್ಳುವ ಪೂಜಾರಿಗಳು ಧಾರ್ಮಿಕ ಸಮಿತಿಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು' ಎಂದಿದ್ದಾರೆ.

'ಪರಿಣತರಿಂದ ಒಟ್ಟು 20 ಪೂಜಾರಿಗಳಿಗೆ ಆರು ತಿಂಗಳ ತರಬೇತಿ ನೀಡಲಾಗಿದೆ. ರಾಮಮಂದಿರದೊಂದಿಗೆ ಆವರಣದಲ್ಲಿರುವ ಎಲ್ಲಾ 18 ದೇವಾಲಯಗಳಲ್ಲಿ ನಿಯೋಜನೆಗೊಳ್ಳುವ ಪೂಜಾರಿಗಳು ಸರತಿ ಪ್ರಕಾರ ಪೂಜೆ ಸಲ್ಲಿಸಲಿದ್ದಾರೆ. ಹೀಗೆ ಪೂಜೆ ಸಲ್ಲಿಸುವವರ ಮನೆಯಲ್ಲಿ ಜನನ ಹಾಗೂ ಮರಣ ಸಂಭವಿಸಿ ಅಶುದ್ಧರಾದಲ್ಲಿ, ಅವರು ದೇವಾಲಯದ ಆವರಣ ಪ್ರವೇಶಿಸುವಂತಿಲ್ಲ' ಎಂದು ಮಿಶ್ರಾ ತಿಳಿಸಿದ್ದಾರೆ.

'ಪೂಜಾ ಕೈಂಕರ್ಯ ನಡೆಸುವವರು ಕಚ್ಚೆ (ಆಚಾಲ), ಮೇಲಂಗಿ (ಚೌಬಂದಿ) ಹಾಗೂ ಪೇಟ (ಸಾಫಾ) ಧರಿಸಬೇಕು. ಕೇಸರಿ ಬಣ್ಣದ ಉಣ್ಣೆಯ ಬಟ್ಟೆಯನ್ನು ಚಳಿಗಾಲದಲ್ಲಿ ತೊಡಬಹುದು. ಮೊಬೈಲ್ ಫೋನ್‌ ತರುವಂತಿಲ್ಲ. ಅದರಲ್ಲೂ ಆಯಂಡ್ರಾಯ್ಡ್‌ ಫೋನ್‌ ಬಳಸುವಂತಿಲ್ಲ. ತೀರಾ ಅಗತ್ಯವಿದ್ದಲ್ಲಿ ಕೀಪ್ಯಾಡ್ ಇರುವ ಸಾಮಾನ್ಯ ಫೋನ್‌ ಅನ್ನೇ ಬಳಸಬೇಕು ಎಂಬ ನಿಯಮಗಳನ್ನು ಮಾಡಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.

ಜ. 22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries