ಕಾಸರಗೋಡು: ಪಯ್ಯನ್ನೂರಿನ ಕರಿವೆಳ್ಳೂರಿನಲ್ಲಿ ಮಹಿಳಾ ಪೊಲೀಸ್ ಕಾನ್‍ಸ್ಟೇಬಲನ್ನು ಆಕೆ ಪತಿ ಕಡಿದು ಕೊಲೆ ನಡೆಸಿದ್ದಾನೆ. ಕಾಸರಗೋಡು ಜಿಲ್ಲೆಯ ಚಂದೇರ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪೊಲೀಸ್ ಅಧಿಕಾರಿಯಾಗಿರುವ ದಿವ್ಯಶ್ರೀ ಕೊಲೆಯಾದ ಗೃಹಿಣಿ. ದಿವ್ಯಶ್ರೀ ಅವರ ತಂದೆ ವಾಸು ಅವರೂ ಗಾಯಗೊಂಡಿದ್ದಾರೆ. ಪರಾರಿಯಾಗಲೆತ್ನಿಸಿದ ಆರೋಪಿ, ದಿವ್ಯಶ್ರೀ ಅವರ ಪತಿ ರಾಜೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಸಂಜೆ ದಿವ್ಯಶ್ರೀ ಮನೆಗೆ ಆಗಮಿಸಿದ ರಾಜೇಶ್ ದಿವ್ಯಶ್ರೀಯನ್ನು ಕಡಿದು ಗಂಭೀರ ಗಾಯಗೊಳಿಸಿದ್ದು, ಬಿಡಿಸಲು ಬಂದ ತಂದೆಗೂ ಕಡಿದಿದ್ದಾನೆ. ಗಂಭೀರ ಗಾಯಗೊಂಡ ದಿವ್ಯಶ್ರೀ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ.