ಕಾಸರಗೋಡು: ವೃದ್ಧ ತಾಯಿಯ ಅನಾರೋಗ್ಯ ಗಂಭೀರಾವಸ್ಥೆಯಲ್ಲಿರುವುದರಿಂದ ಮನನೊಂದ ಪುತ್ರ, ನೇಣುಬಿಗಿದು ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ತಾಯಿಯೂ ಮೃತಪಟ್ಟ ಘಟನೆ ಪುಲ್ಲೂರ್‍ನಲ್ಲಿ ನಡೆದಿದೆ.
ಪುಲ್ಲೂರ್ ಕೊಡವಲ ಚೇರಕ್ಕರ ನಿವಾಸಿ ಸಿ. ಕುಞÂಕಣ್ಣನ್(58)ಮೃತದೇಹ ಕಾಞಂಗಾಡು ವೆಳ್ಳಾಯಿ ಸೇತುವೆ ಸನಿಹ ಹಿತ್ತಿಲಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಾರದ ಹಿಂದೆ ತಾಯಿ ನಾರಾಯಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಮನೆಗೆ ಕರೆದೊಯ್ಯುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕುಞÂಕಣ್ಣನ್ ಹಾಗೂ ಸಹೋದರರು ವಾಹನದಲ್ಲಿ ತಾಯಿಯನ್ನು ಮನೆಗೆ ಕರೆದೊಯ್ಯುತ್ತಿದ್ದ ಮಧ್ಯೆ ಎದೆನೋವಿಗೆ ಔಷಧಿ ಕರೀದಿಸಲಿರುವುದಾಗಿ ತಿಳಿಸಿ ಕುಞÂಕಣ್ಣನ್ ವಾಹನದಿಂದ ಹಾದಿಮಧ್ಯೆ ಇಳಿದಿದ್ದರು. ಮನೆಗೆ ತಲುಪಿ ಅಲ್ಪ ಹೊತ್ತಿನಲ್ಲಿ ತಾಯಿ ನಾರಾಯಣಿ(91)ಮೃತಪಟ್ಟಿದ್ದರು. ನಂತರ ಕುಞÂಕಣ್ಣನ್ ಅವರನ್ನು ಹುಡುಕಾಡುವ ಮಧ್ಯೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಕುಞÂಕಣ್ಣನ್ ಅವಿವಹಿತರಾಗಿದ್ದರು.