ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಮೈಕ್ರೋಗ್ರೀನ್ ಕೃಷಿಗೆ ಚಾಲನೆ ಹಾಗೂ ಎಣ್ಮಕಜೆ ಕುಟುಂಬ ಆರೋಗ್ಯ ಕೇಂದ್ರ ಹಾಗೂ ಸ್ನೇಹಿತಾ ಜೆಂಡರ್ ಸಂಯುಕ್ತಾಶ್ರಯದಲ್ಲಿ ಆನಿಮೀಯ ರೋಗ ನಿರ್ಣಯ ಮಾಹಿತಿ ಶಿಬಿರ ಕುರೆಡ್ಕದಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉನ್ನತೀ ಕಾಲನಿ ನಿವಾಸಿಗಳಿಗೆ ಪೌಷ್ಟಿಕಾಹಾರ ಬೀಜ ಬಿತ್ತನೆ ನಡೆಸಿ ವಿತರಿಸುವ ಮೂಲಕ ಉದ್ಘಾಟಿಸಿದರು. ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪಂ.ಉಪಾಧ್ಯಕ್ಷೆ ರಮ್ಲ, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಭಿ ಹನೀಫ್ ಮಾತನಾಡಿದರು. ಜೆಂಡರ್ ಡಿಪಿಎಂ ಮನು ಎಸ್, ಸ್ನೇಹಿತ ಕೌನ್ಸಿಲರ್ ರಜಿತಾ, ಕಮ್ಯೂನಿಟಿ ಕೌನ್ಸಿಲರ್ ಪ್ರಜಿತಾ, ಸಿಡಿಎಸ್ ಸದಸ್ಯರು, ಎಸ್.ಟಿ.ಅನಿಮೆಟರ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.