ನವದೆಹಲಿ: ಚುನಾವಣೆ ಘೋಷಣೆಯಾದ ಬಳಿಕ ಮಹಾರಾಷ್ಟ್ರದ ಮಹಾಯುತಿ ಸರ್ಕಾರವು ಅದಾನಿ ಸಮೂಹದ ಯೋಜನೆಗಳಿಗೆ ತರಾತುರಿಯಲ್ಲಿ ಅನುಮೋದನೆ ನೀಡಿತ್ತು ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ. ಈ ನಾಟಕಗಳನ್ನು ಜನರು ನೋಡಿದ್ದಾರೆ ಎಂದೂ ಹೇಳಿದೆ.
ನವದೆಹಲಿ: ಚುನಾವಣೆ ಘೋಷಣೆಯಾದ ಬಳಿಕ ಮಹಾರಾಷ್ಟ್ರದ ಮಹಾಯುತಿ ಸರ್ಕಾರವು ಅದಾನಿ ಸಮೂಹದ ಯೋಜನೆಗಳಿಗೆ ತರಾತುರಿಯಲ್ಲಿ ಅನುಮೋದನೆ ನೀಡಿತ್ತು ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ. ಈ ನಾಟಕಗಳನ್ನು ಜನರು ನೋಡಿದ್ದಾರೆ ಎಂದೂ ಹೇಳಿದೆ.
'ಮಹಾಯುತಿ ಸರ್ಕಾರವು ತನ್ನ ಅಧಿಕಾರದ ಕೊನೆಯ ಅವಧಿಯಲ್ಲಿ ಹೇಗೆ ನಡೆದಿದೆ ಎಂದು ನೋಡೋಣ, ಸೆಪ್ಟೆಂಬರ್ 15, 2024: ಹೆಚ್ಚಿನ ಬೆಲೆಯಲ್ಲಿ ಮಹಾರಾಷ್ಟ್ರಕ್ಕೆ 6,600 ಮೆಗಾವ್ಯಾಟ್ ವಿದ್ಯುತ್ ಪೂರೈಸಲು ಮೊದಾನಿ ಇಂಧನ ಗುತ್ತಿಗೆಯನ್ನು ಗೆದ್ದರು; ಸೆಪ್ಟೆಂಬರ್ 30, 2024: 255 ಎಕರೆ ಪರಿಸರ ಸೂಕ್ಷ್ಮ ಭೂಮಿಯನ್ನು ಮೊದಾನಿಗೆ ಹಸ್ತಾಂತರಿಸಲಾಯಿತು' ಎಂದು ಅವರು ಬರೆದುಕೊಂಡಿದ್ದಾರೆ.
'ಅಕ್ಟೋಬರ್ 10, 2024: ಮಧ್‌ನಲ್ಲಿ 140 ಎಕರೆ ಭೂಮಿಯನ್ನು ಮೊದಾನಿಗೆ ಹಸ್ತಾಂತರಿಸಲಾಯಿತು; ಅಕ್ಟೋಬರ್ 14, 2024: ಮುಂಬೈನ ಡಿಯೋನಾರ್ ಲ್ಯಾಂಡ್‌ಫಿಲ್‌ನಿಂದ 124 ಎಕರೆಗಳನ್ನು ಮೊದಾನಿಗೆ ನೀಡಲಾಗಿದೆ' ಎಂದು ಅವರು ಹೇಳಿದ್ದಾರೆ.
'ಆದರೆ ಮಹಾರಾಷ್ಟ್ರದ ಜನರು ಈಗಾಗಲೇ ಈ ಆಟಗಳನ್ನು ನೋಡಿದ್ದಾರೆ. ಅವರು ಖಂಡಿತವಾಗಿಯೂ ಮಹಾ ವಿಕಾಸ ಅಘಾಡಿಗೆ ಸ್ಪಷ್ಟ ಮತ್ತು ನಿರ್ಣಾಯಕ ಬಹುಮತ ನೀಡುತ್ತಾರೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ.