HEALTH TIPS

ಕಾಸರಗೋಡಿನ ವಿಶೇಷ ಪ್ರಕರಣ; ಪುರಸ್ಕರಿಸದ ನ್ಯಾಯಾಲಯ-ಅಪರಾಧ ನಡೆದ ಸ್ಥಳದಲ್ಲಿಯೇ ಉಳಿಯುವ ಆರೋಪಿಯ ನಿರ್ಧಾರವನ್ನು ಮಾನಸಿಕ ಅಸ್ವಸ್ಥತೆ ಎಂದು ಪರಿಗಣಿಸಲಾಗದು-ಕೇರಳ ಹೈಕೋರ್ಟ್

ಕೊಚ್ಚಿ: ಅಪರಾಧ ಎಸಗಿ ತಪ್ಪಿಸಿಕೊಳ್ಳಲು ಯತ್ನಿಸದೆ ಅಪರಾಧ ನಡೆದ ಸ್ಥಳದಲ್ಲಿಯೇ ಉಳಿದುಕೊಂಡಿರುವ ಆರೋಪಿಯ ನಿರ್ಧಾರವನ್ನು ಮಾನಸಿಕ ಅಸಾಮಥ್ರ್ಯ ಎಂದು ಪರಿಗಣಿಸಲಾಗದು ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ.

2015ರಲ್ಲಿ ಮೂರು ವರ್ಷದ ಮಗನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ನಿವಾಸಿ ಎಂ.ಎ.ರಾಜು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ವಿ. ರಾಜಾ ವಿಜಯರಾಘವನ್ ಮತ್ತು ನ್ಯಾಯಮೂರ್ತಿ ಜೋಬಿನ್ ಸೆಬಾಸ್ಟಿಯನ್ ಅವರನ್ನೊಳಗೊಂಡ ವಿಭಾಗೀಯ ಪೀಠದ ತೀರ್ಪು ಮಹತ್ತರವೆಂದೇ ಪರಿಗಣಿಸಬಹುದಾಗಿದೆ.

ಪತ್ನಿಯೊಂದಿಗೆ ಜಗಳವಾಡಿ ಮಗನನ್ನು ಪಕ್ಕದ ಮನೆಗೆ ಕರೆದೊಯ್ದು ಕೊಲೆಗೈದ ಪ್ರಕರಣದಲ್ಲಿ ಅರ್ಜಿದಾರರು ಆರೋಪಿಯಾಗಿದ್ದಾರೆ. ವಿಚಾರಣೆ ಬಳಿಕ ಕಾಸರಗೋಡು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿತ್ತು.

 ಅರ್ಜಿದಾರನು ತನ್ನ ಕ್ರಿಯೆಗಳ ಪರಿಣಾಮಗಳನ್ನು ಮುಂಗಾಣುವ ಸ್ಥಿತಿಯಲ್ಲಿರಲಿಲ್ಲ ಅಥವಾ ನಿರ್ದಿಷ್ಟ ಸಂದರ್ಭಗಳ ಕಾರಣ ಅವು ತಪ್ಪು ಅಥವಾ ಕಾನೂನುಬಾಹಿರವೆಂದು ಅರಿತುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ ಎಂದು ಅಪರಾಧಿಯ ಮೇಲ್ಮನವಿಯಲ್ಲಿ ವಾದಿಸಲಾಗಿತ್ತು. ಪ್ರತಿವಾದಿಯು ತಪ್ಪಿಸಿಕೊಳ್ಳಲು ಪ್ರಯತ್ನಿಸದೆ ಘಟನಾ ಸ್ಥಳದಲ್ಲಿಯೇ ಉಳಿದಿರುವುದು ರೋಗಗ್ರಸ್ತ ಮನಸ್ಸನ್ನು ಸೂಚಿಸುವ ತರ್ಕಬದ್ಧ ಚಿಂತನೆಯ ಕೊರತೆಯನ್ನು ಪ್ರದರ್ಶಿಸುತ್ತದೆ ಎಂದು ಪ್ರತಿವಾದಿ ಪರ ವಕೀಲರು ವಾದಿಸಿದರು.

ಆದರೆ, ಈ ವಾದವನ್ನು ತಳ್ಳಿಹಾಕಿದ ಪೀಠ, ಅಪರಾಧ ಎಸಗಿದ ನಂತರ ಎಲ್ಲ ಆರೋಪಿಗಳು ತಲೆಮರೆಸಿಕೊಳ್ಳಬೇಕು ಎಂದು ಭಾವಿಸುವಂತಿಲ್ಲ ಎಂದು ಹೇಳಿದೆ. ವರ್ತನೆಯ ಮಾದರಿಗಳು ವ್ಯಕ್ತಿಗಳ ನಡುವೆ ಬದಲಾಗಬಹುದು, ಮತ್ತು ಅಪರಾಧದ ಸ್ಥಳದಲ್ಲಿ ಉಳಿಯುವುದು ಮಾನಸಿಕ ಅಸ್ವಸ್ಥತೆಯನ್ನು ಸೂಚಿಸುವುದಿಲ್ಲ. ಅಪರಾಧದ ಸಮಯದಲ್ಲಿ ಮನಸ್ಸಿನ ಅಸ್ವಸ್ಥತೆಯನ್ನು ತೋರಿಸುವ ಗಣನೀಯ ಪುರಾವೆಗಳಿಲ್ಲದೆ, ಮಾನಸಿಕ ಅಸ್ವಸ್ಥನೆಂದು ಆರೋಪಿಯನ್ನು ಖುಲಾಸೆಗೊಳಿಸಲು ಹಕ್ಕು ಸಾಕಾಗುವುದಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ. ಬಳಿಕ ಕೇರಳ ಹೈಕೋರ್ಟ್ ಪೀಠ ವಿಚಾರಣಾ ನ್ಯಾಯಾಲಯದ ಶಿಕ್ಷೆಯನ್ನು ಎತ್ತಿ ಹಿಡಿಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries