ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ನಗರ ಘಟಕದ ನೇತೃತ್ವದಲ್ಲಿ ಧರ್ಮ ರಕ್ಷಾ ನಿಧಿಯ ಉದ್ಘಾಟನಾ ಸಮಾರಂಭ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ನೆರವೇರಿತು. ವಿಶ್ವ ಹಿಂದೂ ಪರಿಷತ್ ಕೇರಳ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ವಿ. ಆರ್ ರಾಜಶೇಖರನ್ ಸಮಾರಂಭ ಉದ್ಘಾಟಿಸಿದರು. ಕಣ್ಣೂರು ವಿಭಾಗ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರನ್ ಜಿ, ಸತ್ಸಂಘ್ ಸಹ ಸಂಯೋಜಕ್ ಸಂಕಪ್ಪ ಭಂಡಾರಿ, ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ, ವಿಶ್ವ ಹಿಂದೂ ಪರಿಷತ್ ಕಾಸರಗೋಡು ನಗರ ಸಮಿತಿಯ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ, ಶಶಿಧರ ಕೂಡ್ಲು, ಕಾಸರಗೋಡು ಜಿಲ್ಲಾ ಧರ್ಮ ಪ್ರಸಾರ ಪ್ರಮುಖ್ ವಾಮನ ಆಚಾರ್ಯ ಉಪಸ್ಥಿತರಿದ್ದರು. ಈ ಸಂದಭ್ ಎಲ್ಲಾ ಪ್ರಖಂಡ್, ಖಂಡ್, ಸ್ಥಾನೀಯ ಸಮಿತಿಗಳ ಕಾರ್ಯಕರ್ತರು ಧರ್ಮ ರಕ್ಷಾ ನಿಧಿಗೆ ದೇಣಿಗೆ ಸಮರ್ಪಿಸಿದರು.
ಕನಕ ಜಯಂತಿ:
ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ ಕನಕದಾಸ ಜಯಂತಿಯನ್ನು ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಆಚರಿಸಲಾಯಿತು. ಹಿರಿಯ ಭಜನಾ ಸಂಕೀರ್ತನಕಾರ ಮೋಹನ್ ಆಚಾರ್ಯ ಪುಳ್ಕೂರು ಸಮಾರಂಭ ಉದ್ಘಾಟಿಸಿದರು.
ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ ಕಮಲಾಕ್ಷ ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರೋಹಿತ್ ಮಧೂರು, ಚಂದ್ರಕಲಾ ಆಚಾರ್ಯ ಉಳಿಯತ್ತಡ್ಕ, ಗುರುಪ್ರಸಾದ್ ಕೋಟೆಕಣಿ, ದಿವಾಕರ ಅಶೋಕನಗರ ಮೊದಲಾದವರು ಉಪಸ್ಥಿತರಿದ್ದರು.