ದುಬೈ: ಯೆಮೆನ್‌ನ ಹೂಥಿ ಬಂಡುಕೋರರು ಅಮೆರಿಕದ ಯುದ್ಧ ನೌಕೆಗಳನ್ನು ಗುರಿಯಾಗಿಸಿ ಮಂಗಳವಾರ ಹಲವು ಸುತ್ತಿನಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದಾರೆ. ಆದರೆ, ದಾಳಿ ಯತ್ನವು ಯಶಸ್ವಿಯಾಗಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ ಪ್ರತಿಕ್ರಿಯಿಸಿದೆ.

ಪೆಂಟಗನ್‌ನ ಪತ್ರಿಕಾ ಕಾರ್ಯದರ್ಶಿ ಮೇಜರ್ ಜನರಲ್ ಪ್ಯಾಟ್ ರೈಡರ್ ಅವರು, 'ಇರಾನ್ ಬೆಂಬಲಿತ ಹೂಥಿ ಬಂಡುಕೋರರು ಕನಿಷ್ಠ ಎಂಟು ಡ್ರೋನ್, ಐದು ಕ್ಷಿಪಣಿ ಪ್ರಯೋಗಿಸಿದ್ದಾರೆ.
ಕೆಂಪು ಸಮುದ್ರ ಮತ್ತು ಆಯಡೆನ್ ಕೊಲ್ಲಿ ಸಂಪರ್ಕಿಸುವ ಜಲಸಂಧಿಯಲ್ಲಿ ಪ್ರತಿವರ್ಷ ಒಂದು ಟ್ರಿಲಿಯನ್ ಡಾಲರ್ ಮೌಲ್ಯದ ಸರಕುಗಳ ಸಾಗಣೆ ನಡೆಯುತ್ತದೆ. ಈ ಮಾರ್ಗದ ಮೂಲಕ ಸಾಗುವ ಹಡಗುಗಳನ್ನು ಗುರಿಯಾಗಿಸಿ ಬಂಡುಕೋರರು ದಾಳಿ ನಡೆಸುತ್ತಿದ್ದಾರೆ.
ಯುದ್ಧ ನಿಲ್ಲುವವರೆಗೂ ದಾಳಿ ನಡೆಯಲಿದೆ ಎಂದು ಹೂಥಿಗಳು ಸ್ಪಷ್ಟಪಡಿಸಿದ್ದಾರೆ. ಹೂಥಿ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಯಹ್ಯಾ ಸಾರಿ ಧ್ವನಿ ಸಂದೇಶ ಬಿಡುಗಡೆ ಮಾಡಿದ್ದು, ಕೆಂಪು ಸಮುದ್ರದಲ್ಲಿ ಅಮೆರಿಕದ ಎರಡು ಯುದ್ಧ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್, ಅಮೆರಿಕ, ಬ್ರಿಟನ್ ಮೂಲದ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಹಮಾಸ್ ಅನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ಅಂತ್ಯಗೊಳಿಸುವುದೇ ಗುರಿ ಎಂದು ಬಂಡುಕೋರರರು ಪ್ರತಿಪಾದಿಸಿದ್ದಾರೆ.