ತಿರುವನಂತಪುರಂ: ಪಾಲಕ್ಕಾಡ್ ಕಪ್ಪುಹಣ ವಿವಾದದಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶಿಸಿದೆ. ಆಯೋಗವು ಚುನಾವಣಾ ಉಸ್ತುವಾರಿ ಪಾಲಕ್ಕಾಡ್ ಕಲೆಕ್ಟರ್‍ಗೆ ವರದಿ ಕೇಳಿದೆ.
ಉಪಚುನಾವಣೆ ಚಟುವಟಿಕೆಗೆ ಬಂದಿದ್ದ ಕಾಂಗ್ರೆಸ್ ಮಹಿಳಾ ಮುಖಂಡರ ಹೊಟೇಲ್ ಕೊಠಡಿಗಳ ತಪಾಸಣೆ ನಡೆಸಿ ಏನಾಯಿತು ಎಂಬ ಬಗ್ಗೆ ಜಿಲ್ಲಾಧಿಕಾರಿಯಿಂದ ಪ್ರಾಥಮಿಕ ವರದಿ ಕೇಳಲಾಗಿದೆ.
ಕಪ್ಪುಹಣ ಪತ್ತೆ ಹೆಸರಲ್ಲಿ ಬುಧವಾರ ಬೆಳಗಿನ ಜಾವ 12 ಗಂಟೆ ನಂತರ ಪೋಲೀಸರು ನಡೆಸಿದ ವಿವಾದಾತ್ಮಕ ದಾಳಿ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮಧ್ಯಪ್ರವೇಶವಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೆಪಿಎಂ ಹೋಟೆಲ್‍ನಲ್ಲಿ ನಾಯಕರು ತಂಗಿದ್ದ 12 ಕೊಠಡಿಗಳಲ್ಲಿ ಪೋಲೀಸ್ ತಂಡ ಶೋಧ ನಡೆಸಿದೆ. ಪೋಲೀಸರು ಕೊಠಡಿಯನ್ನು ಪರಿಶೀಲಿಸಿದರೂ ಏನೂ ಸಿಗಲಿಲ್ಲ ಎಂದು ಬರೆದುಕೊಂಡು ಹಿಂತಿರುಗಿದರು. ತಪಾಸಣೆ ವಿವಾದವಾದ ನಂತರ, ಗೌಪ್ಯ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಪೋಲೀಸರು ವಿವರಿಸಿದರು.
ಈ ದಾಳಿಯಲ್ಲಿ ಸಿಪಿಎಂ ವಿರುದ್ಧ ವಿರೋಧ ಪಕ್ಷದ ನಾಯಕ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಸಿಪಿಎಂ ಪೋಲೀಸರನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿದೆ ಎಂದು ವಿ. ಡಿ ಸತೀಶನ್ ದೂರಿನಲ್ಲಿ ತಿಳಿಸಿದ್ದಾರೆ.