ಕೊಲ್ಲಂ: ಕೊಲ್ಲಂನಲ್ಲಿ ಧಾರಾವಾಹಿ ನಟಿಯೊಬ್ಬರಿಗೆ ಎಂಡಿಎಂಎ ಪೂರೈಕೆ ಮಾಡುತ್ತಿದ್ದ ನವಾಜ್, ಕರ್ನಾಟಕದಿಂದ ಡ್ರಗ್ ತರಿಸುತ್ತಿದ್ದ ಎಂದು ತಿಳಿದುಬಂದಿದೆ.
ಆರಂಭದ ದಿನಗಳಲ್ಲಿ ನವಾಜ್ ಗಾಂಜಾ ಮಾರಾಟ ಮಾಡುತ್ತಿದ್ದ. ನಂತರ ಹೆಚ್ಚಿನ ಲಾಭದ ಗುರಿಯೊಂದಿಗೆ ಎಂಡಿಎಂಎ ವ್ಯವಹಾರದತ್ತ ಮುಖ ಮಾಡಿದ. ಈ ಮಧ್ಯೆ, ನಟಿ ಶಾಮನಾಥ್ ಅವರನ್ನು ಭೇಟಿಯಾಗಿ ಅವರೊಂದಿಗೆ ಸಂಬಂಧವನ್ನು ಪ್ರಾರಂಭಿಸುತ್ತಾನೆ. ಪಾರ್ವತಿ ಎಂದೇ ಕರೆಯಲ್ಪಡುವ ಶಾಮನಾಥ್‍ಗೆ ಎಂಡಿಎಂಎಯನ್ನು ನಿಯಮಿತವಾಗಿ ಪೂರೈಸುತ್ತಿದ್ದವನು ನವಾಜ್.
ಅಕ್ಟೋಬರ್ 18 ರಂದು ಪರವೂರು ಕಿರಿಂಕಾರದ ಮನೆಯಿಂದ ಪಾರ್ವತಿ ಎಂದೇ ಖ್ಯಾತರಾಗಿರುವ ಧಾರಾವಾಹಿ ನಟಿ ಶಾಮನಾಥ್ ಅವರನ್ನು ಎಂಡಿಎಂಎಯೊಂದಿಗೆ ಬಂಧಿಸಲಾಗಿತ್ತು. ತನ್ನ ಸ್ವಂತ ಬಳಕೆಗಾಗಿ ಎಂಡಿಎಂಎ ಖರೀದಿಸಿದೆ ಎಂದು ನಟಿ ಹೇಳಿದ್ದಳು. ಶಾಮನಾಥ್ ಮತ್ತು ನವಾಜ್ ಡ್ರಗ್ಸ್ ದಂಧೆಯ ಮೂಲಕ ಸ್ನೇಹಿತರಾಗಿದ್ದರು. ನಟಿ ನವಾಜ್ ನಿಂದ ಡ್ರಗ್ಸ್ ಖರೀದಿಸಿರುವ ವಿಷಯ ತಿಳಿದ ಪರವೂರು ಪೋಲೀಸರು ನಡೆಸಿದ ದಾಳಿಯಲ್ಲಿ ಶಾಮನಾಥ್ ಎಂಡಿಎಂಎಯೊಂದಿಗೆ ಸಿಕ್ಕಿಬಿದ್ದಿದ್ದಳು.
ನಟಿ ಶಾಮನಾಥ್ ಬಂಧನದ ಬಳಿಕ ಪರಾರಿಯಾಗಿದ್ದ ಕಡೈಕಲ್ ಮೂಲದ ನವಾಜ್ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದ. ನವಾಜ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ನವಾಜ್ ವಿರುದ್ಧ ಸುಮಾರು 20 ಪ್ರಕರಣಗಳಿವೆ. ಈತನ ವಿರುದ್ಧ ವಿವಿಧ ಅಬಕಾರಿ ವ್ಯಾಪ್ತಿ ಹಾಗೂ ಪೆÇಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ.
ನವಾಜ್ ಡೈವರ್ ಆಗಿದ್ದ. ಕೇರಳದ ವಿವಿಧ ಸ್ಥಳಗಳಿಂದ ಹಣ್ಣುಗಳು ಮತ್ತು ಸಾಂಬಾರ ಪದಾರ್ಥಗಳನ್ನು ಸಂಗ್ರಹಿಸಿ ಬೇರೆ ರಾಜ್ಯಗಳಿಗೆ ಸಾಗಿಸುವ ಕೆಲಸದಲ್ಲಿ ಗಾಂಜಾ ಕಳ್ಳಸಾಗಣೆ ಪ್ರಾರಂಭವಾಗುತ್ತದೆ. ಬೇರೆ ರಾಜ್ಯಗಳಲ್ಲಿ ಸರಕನ್ನು ತೆಗೆದುಕೊಂಡು ಹಿಂತಿರುಗುವಾಗ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ. ಕೇರಳಕ್ಕೆ ತಲುಪಿಸುವ ಗಾಂಜಾವನ್ನು ಸಗಟು ಮತ್ತು ಚಿಲ್ಲರೆ ಮಾರಾಟ ಮಾಡಲಾಗುತ್ತಿತ್ತು.
ಗಾಂಜಾದಿಂದ ಆರಂಭವಾದ ವ್ಯಾಪಾರ ನಿಧಾನವಾಗಿ ಎಂಡಿಎಂಎಗೆ ಬದಲಾಯಿತು. ಹೆಚ್ಚಿನ ಲಾಭಕ್ಕಾಗಿ ಎಂಡಿಎಂಎಗೆ ಬದಲಾದರು. ದಕ್ಷಿಣ ಕೇರಳದ ಡ್ರಗ್ಸ್ ಜಾಲದ ಪ್ರಮುಖ ಕೊಂಡಿಯಾದ ನವಾಜ್ ಫಾಸ್ಟ್ ಫುಡ್‍ಗೆ ರುಚಿಯನ್ನು ಸೇರಿಸಲು ಬಳಸಲಾಗುವ ಅಜಿನೊಮೊಟೊದೊಂದಿಗೆ ಎಂಡಿಎಂಎ ಬೆರೆಸಿ ಮಾರಾಟ ಮಾಡಿದ್ದಾನೆ.