HEALTH TIPS

ಕನ್ನಡ ಗ್ರಾಮದಲ್ಲಿ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ-ಸಾಂಸ್ಕøತಿಕ ಮೆರವಣಿಗೆ, ಪ್ರಶಸ್ತಿಪ್ರದಾನ, ಕಲಾ-ಸಾಂಸ್ಕøತಿಕ ಕಾರ್ಯಕ್ರಮ

ಕಾಸರಗೋಡು: ಗಡಿನಾಡು ಕಾಸರಗೋಡಿನ ಕನ್ನಡ ಚಟುವಟಿಕೆ ಇಲ್ಲಿನ ಭಾಷೆ, ಸಂಸ್ಕøತಿಯನ್ನು ಶ್ರೀಮಂತಗೊಳಿಸಿರುವುದಾಗಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸಿ.ಎನ್ ಅಶೋಕ್ ತಿಳಿಸಿದರು. ಅವರು ಕಾಸರಗೋಡು ಪಾರೆಕಟ್ಟ ಕನ್ನಡ ಗ್ರಾಮದಲ್ಲಿ  ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಇದರ ಆಶ್ರಯದಲ್ಲಿ  ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ನಡೆದ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಸಾಹಿತ್ಯಿಕ ಭರವಸೆ ಮೂಡಿಸುವ ಕೆಲಸ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ನಡೆಸುತ್ತಿದೆ. ಕಾಸರಗೋಡಿನಲ್ಲಿ ನಡೆಯುವ ಕನ್ನಡಪರ ಕಾರ್ಯಕ್ರಮಗಳಿಂದ ಇಡೀ ಕೇರಳಕ್ಕೆ ಕನ್ನಡದ ಕಂಪು ಹರಡುವಂತಾಗಿದೆ. ಗಡಿನಾಡಿನಲ್ಲಿ ಕನ್ನಡಪರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಶಿವರಾಮ ಕಾಸರಗೋಡು ಅವರ ಶ್ರಮ ಶ್ಲಾಘನೀಯ ಎಂದು ತಿಳಿಸಿದರು.

ಹರ್ಷಿತಾ ಪಿ. ಪೆರ್ಲ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಶ್ರವಣಬೆಳಗೋಳ ಶಾಸಕ ಸಿ.ಎನ್ ಬಾಲಕೃಷ್ಣ ಹಾಗೂ ಕುಸುಮಾ ದಂಪತಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಹ ಅಧ್ಯಕ್ಷೆ  ಶಿವಾನಿ ಕೂಡ್ಲು, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ನಗರಸಭಾ ಪ್ರತಿಪಕ್ಷ ಮುಖಂಡ ಪಿ.ರಮೇಶ್, ಧನಂಜಯ ಕುಂಬಳೆ, ವಿ.ಬಿ ಕುಳಮರ್ವ, ವಿಶಾಲಾಕ್ಷ ಪುತ್ರಕಳ, ರಾಧಾಕೃಷ್ಣ ಉಳಿಯತ್ತಡ್ಕ,  ಕೆ. ಸತೀಶ್ ಕೂಡ್ಲು, ರಮಶ್ ಎಂ. ಬಾಯಾರು, ಲವ ಕೆ ಮೀಪುಗುರಿ, ರಾಮ ಪ್ರಸಾದ್, ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಂ ಶಹೀದ್, ಡಿ. ಜಯರಾಂ ನೆಲ್ಲಿತ್ತಾಯ, ಕೀರ್ತಿಶೇಖರ್, ಪುರುಷೋತ್ತಮ ನಾಯ್ಕ್ ಕೆಸಿಎನ್, ಡಾ. ರಾಜೇಶ್ ರೈ, ಸುಭಾಷ್ ಪೆರ್ಲ, ವರಪ್ರಸಾದ್ ಕೋಟೆಕಣಿ, ಗುರುಪ್ರಸಾದ್ ಕೊಟೆಕಣಿ, ನಗರಸಭಾ ಮಾಜಿ ಸದಸ್ಯ ಶಂಕರ ಕೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಶಾಲಿನಿ ಸತೀಶ್ ಶೆಟ್ಟಿ ಥಾಣೆ ಅವರಿಗೆ ಕರಾವಳಿ ಪ್ರತಿಭಾಶಾಲಿನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಶಿವರಾಮ ಕಾಸರಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾವ್ಯಾಕುಶಲ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. 

ಕಾರ್ಯಕ್ರಮಕ್ಕೆ ಮೊದಲು ಕೂಡ್ಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಠಾರದಿಂದ ಸಮ್ಮೇಳನಾಧ್ಯಕ್ಷರು, ಅತಿಥಿಗಳನ್ನೊಳಗೊಂಡ ಭವ್ಯ ಸಾಂಸ್ಕøತಿಕ ಮೆರವಣಿಗೆ ಸಮ್ಮೇಳನ ನಗರದ ವರೆಗೆ  ನಡೆಯಿತು. ಸಮ್ಮೇಳನ ನಗರದಲ್ಲಿ  ರಾಷ್ಟ್ರಧ್ವಜ,  ಮಕ್ಕಳ ಸಾಹಿತ್ಯ ಪರಿಷತ್ ಧ್ವಜ ಹಾಗೂ ಕನ್ನಡ ಧ್ವಜಾರೋಹಣವನ್ನು ನಗರಸಭಾ ಸದಸ್ಯೆ ಶಾರದಾ ಜೆ.ಪಿ ನಗರಶಿವರಾಂ ಕಾಸರಗೋಡು ಹಾಗೂ ಸಿ.ಎನ್ ಅಶೋಕ್ ನಡೆಸಿದರು. ಪುಸ್ತಕ ಪ್ರದರ್ಶನ, ಕಲಾ ಪ್ರದರ್ಶನ, ತೆಂಕುತಿಟ್ಟಿನ ಯಕ್ಷಗಾನ ವೇಷಭೂಷಣಗಳ ಪ್ರದರ್ಶನ, ಕೃಷಿ-ಹಣ್ಣುಹಂಪಲು ಪ್ರದರ್ಶನ, ಗ್ರಾಮೀಣ ಆಹಾರಮೇಳ, ವೈದ್ಯಕೀಯ ತಪಾಸಣೆ, ವಿದ್ಯಾರ್ಥಿಪ್ರತಿನಿಧಿಗಳ ನೋಂದಾವಣೆ ಕಾರ್ಯಾಲಯ, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳ ಕಾರ್ಯಾಲಯ, ಮಕ್ಕಳ ಸ್ಪರ್ಧಾವೇದಿಕೆಯ ಉದ್ಘಾಟನೆಯನ್ನು ಅತಿಥಿಗಳು ನಿರ್ವಹಿಸಿದರು.  ಈ ಸಂದರ್ಭ'ನಮ್ಮ ಕಾಸರಗೋಡು ನಮ್ಮೆ ಹೆಮ್ಮೆ' ವರ್ಷಾಚರಣೆ ಅಂಗವಾಗಿ ಕನ್ನಡ ಗ್ರಾಮದಲ್ಲಿ  60ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಿ.ಎನ್ ಅಶೋಕ್ ಚಾಲನೆ ನೀಡಿದರು. ರಾಜ್ಯಮಟ್ಟದ ವಿದ್ಯಾರ್ಥಿ ಕವಿಗೋಷ್ಠಿ, ಸಣ್ಣ ಕಥಾ ಗೋಷ್ಠಿ, ಸಾಂಸ್ಕøತಿಕ-ಕಲಾ ಕಾರ್ಯಕ್ರಮ ಜರುಗಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries