HEALTH TIPS

ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯಿತಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಜನಪ್ರತಿನಿಧಿಗಳಿಂದ ನಿರಾಹಾರ ಸತ್ಯಾಗ್ರಹ

ಕಾಸರಗೋಡು: ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಆಡಳಿತ ಸಮಿತಿಯ ಸ್ವಜನಪಕ್ಷಪಾತದಿಂದ ಕೂಡಿದ ಅಡಳಿತ ವಿರೋಧಿಸಿ,  ಬಿಜೆಪಿ ಜನಪ್ರತಿನಿಧಿಗಳು ಪಂಚಾಯಿತಿ ಕಚೇರಿ ಎದುರು ಒಂದು ದಿನದ ನಿರಹಾರ ಸತ್ಯಾಗ್ರಹ ನಡೆಸಿದರು. 

ಕುನ್ನಿಲ್‍ನೀರ್ಚಾಲ್‍ನಿಂದ ಮಜಲ್ ಉಜಿರೆಕರೆ ಶಾಲೆ ವರೆಗಿನ ರಸ್ತೆ ದುರಸ್ತಿ ನಡೆಸಬೇಕು,  ಕಂಬಾರ ಸಾರ್ವಜನಿಕ ಸಮಶಾನವನ್ನು ಶವ ಸಂಸ್ಕಾರಕ್ಕೆ ಬಿಟ್ಟುಕೊಡಬೇಕು, ವಾರ್ಡುಗಳ ಅಭಿವೃದ್ಧಿಗಾಗಿ  ಹಣ ಮಂಜೂರುಗೊಳಿಸುವಲ್ಲಿ ರಾಜಕೀಯದ ತಾರತಮ್ಯ ಕೊನೆಗಾಣಿಸಬೇಕು, ಪಂಚಾಯಿತಿ ವ್ಯಾಪ್ತಿಯಲ್ಲಿ ಕತ್ತಲು ಹೋಗಲಾಡಿಸಲು ಎಲ್ಲ ವಾರ್ಡ್‍ಗಳಲ್ಲಿ ಬೀದಿದೀಪ ಅಳವಡಿಸುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರಿಂದ ನಿರಾಹಾರ ಸತ್ಯಾಗ್ರಹ ಆಯೋಜಿಸಲಾಗಿತ್ತು. 

ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಬಿಜೆಪಿ ಸದಸ್ಯರಾದ ಪ್ರಮೀಳಾ ಮಜಲ್, ಸಂಪತ್ ಕುಮಾರ್, ಗಿರೀಶ, ಮಲ್ಲಿಕಾ ಪ್ರಭಾಕರ್, ಕೆ. ಬಿ. ಸುಲೋಚನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries