ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ತಡೆದಿದ್ದು ನನ್ನ ಜೀವನದಲ್ಲಿ ಮಾಡಿದ ಬಹುದೊಡ್ಡ ಪುಣ್ಯ ಎಂದು ಬಿಜೆಪಿ ಮಾಜಿ ನಾಯಕ, ಗೋವಾ ರಾಜ್ಯಪಾಲ ಅಡ್ವ. ಪಿಎಸ್ ಶ್ರೀಧರನ್ ಪಿಳ್ಳೈ ಹೇಳಿದ್ದಾರೆ.
ಶಬರಿಮಲೆ ದೇಗುಲವನ್ನು ಮಹಿಳೆಯರಿಗೆ ಪ್ರವೇಶ ನೀಡಬಾರದೆಂಬ ವಿಚಾರವಾಗಿ ಯುವಮೋರ್ಚಾ ಸಮಾವೇಶದಲ್ಲಿ ತಾನು ಮಾಡಿದ್ದ ಭಾಷಣಕ್ಕೆ ಕೋಝಿಕ್ಕೋಡ್ ಕಸಬಾ ಪೊಲೀಸರು ತನ್ನ ವಿರುದ್ಧ ಪ್ರಕರಣ ದಾಖಲಿಸಿದ್ದರು. ತುಲಾಮಾಸ ಪೂಜೆಯ ವೇಳೆ ಯುವತಿಯರು ಸನ್ನಿಧಾನಕ್ಕೆ ಪ್ರವೇಶಿಸಿದರೆ ಗರ್ಭಗೃಹ ಮುಚಗಚಲಾಗುವುದೆಂಬುದು ತಂತ್ರಿ ಕಂಠಾರರ್ ರಾಜೀವ ಅವರ ನಿಲುವು ಎಂದು ಶ್ರೀಧರನ್ ಪಿಳ್ಳೆ ಹೇಳಿದ್ದರು.
ಶ್ರೀಧರನ್ ಪಿಳ್ಳೈ ಅವರು ನ್ಯಾಯಾಂಗ ನಿಂದನೆಗೆ ಪ್ರಚೋದನೆ ನೀಡಿದ್ದಾರೆ ಎಂದು ಕೋಝಿಕ್ಕೋಡ್ ನಮಂದದ ನಿವಾಸಿಯೊಬ್ಬರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ಹೈಕೋರ್ಟ್‌ನ ನಿಲುವು ನ್ಯಾಯಾಲಯದ ತೀರ್ಪುಗಳ ನ್ಯಾಯಯುತ ಟೀಕೆಯನ್ನು ನ್ಯಾಯಾಲಯದ ನಿಂದನೆ ಎಂದು ಪರಿಗಣಿಸಲಾಗುವುದಿಲ್ಲ.
ಸುಪ್ರೀಂ ಕೋರ್ಟ್ ತೀರ್ಪಿನ ನೆಪದಲ್ಲಿ ಶಬರಿಮಲೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಉಲ್ಲಂಘಿಸುವ ಎಡಪಕ್ಷಗಳ ಪ್ರಯತ್ನವನ್ನು ಪ್ರತಿಭಟಿಸುತ್ತಿರುವಾಗ ಈ ಘಟನೆ ನಡೆದಿದೆ ಎಂದು ಶ್ರೀದರನ್ ಪಿಳ್ಳೆ ಹೇಳಿಕೆಯೊಂದರಲ್ಲಿ ನೆನಪಿಸಿದ್ದಾರೆ.