ಮುಳ್ಳೇರಿಯ : ಶೇಣಿ ಶ್ರೀಶಾರದಾಂಭಾ ವಿದ್ಯಾಸಂಸ್ಥೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಕೇರಳ ಶಾಲಾ ಕಲೋತ್ಸವದಲ್ಲಿ ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಗಮನಾರ್ಹ ಸಾಧನೆಯನ್ನು ಮಾಡಿ ಹಿರಿಯ ಪ್ರಾಥಮಿಕ ಕನ್ನಡ ವಿಭಾಗದಲ್ಲಿ ಚಾಂಪಿಯನ್ ಶಿಪ್, ಕಿರಿಯ ಪ್ರಾಥಮಿಕ ಜನರಲ್ ಮತ್ತು ಹಿರಿಯ ಪ್ರಾಥಮಿಕ ಜನರಲ್ ವಿಭಾಗಗಳಲ್ಲಿ ರನ್ನರ್ ಅಪ್ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡಿದೆ. ಉಪಜಿಲ್ಲಾ ಕಲೋತ್ಸವದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲೆಯ ರಕ್ಷಕ ಶಿಕ್ಷಕ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಆಡಳಿತ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳುಇ ಶುಕ್ರವಾರ ಮುಳ್ಳೇರಿಯದಲ್ಲಿ ಹರ್ಷೋತ್ಸವ ಮೆರವಣಿಗೆ ನಡೆಸಿದರು.