ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಸಮೀಪ ಸಂಸದರ ನಿಧಿಯಿಂದ ಅಳವಡಿಸಿದ ಹೈ ಮಾಸ್ಟ್ ಬೀದಿ ದೀಪವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಸೋಮವಾರ ಉದ್ಘಾಟಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತ.ಬಿ. ಅಧ್ಯಕ್ಷತೆ ವಹಿಸಿದ್ದರು..ಗ್ರಾಮ ಪಂಚಾಯತಿ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಕ್ಷೇತ್ರದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರ್, ಮೊಕ್ತೇಸರ ಜಗನ್ನಾಥ ರೈ, ಸಾಮಾಜಿಕ ನೇತಾರ, ಮಾಜಿ ಮೊಕ್ತೇಸರ ಪಿ.ಜಿ. ಚಂದ್ರಹಾಸ ರೈ, ಮಾಹಿನ್ ಕೇಳೋಟ್, ತಿರುಪತಿ ಕುಮಾರ್ ಭಟ್, ಭಾಸ್ಕರ.ಪಂಜಿತಡ್ಕ ಸಂಘ-ಸಂಸ್ಥೆಯ ಸದಸ್ಯರು ಮಾತೆಯರು, ಉಪಸ್ಥಿತರಿದ್ದರು.