ಕೊಚ್ಚಿ: ಕಳೆದ ಶುಕ್ರವಾರ (ನ.8) ಕೇರಳದ ವಯನಾಡಿನ ತಿರುನೆಲ್ಲಿ-ಮನಂತವಾಡಿ ರಸ್ತೆಯಲ್ಲಿ ಮರಿ ಆನೆಯೊಂದು ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಸ್ತೆ ಬಿಟ್ಟು ಕದಲದೆ ತಲೆ ಮತ್ತು ಬಾಲವನ್ನು ಅಲ್ಲಾಡಿಸುತ್ತಾ ಅಲ್ಲಿಯೇ ನಿಂತಿದ್ದ ಆನೆ ಮರಿಯನ್ನು ಕಂಡು ಪ್ರಯಾಣಿಕರು ಖುಷಿಯಾದರು.

ಆನೆ ಮರಿಯು ಗುರುವಾರ (ನ.07) ಬೆಳಗ್ಗೆ 7 ಗಂಟೆ ಸುಮಾರಿಗೆ ಥೆಟ್ಟುರೋಡ್ ಜಂಕ್ಷನ್ ಬಳಿ ಮೊದಲು ಕಾಣಿಸಿಕೊಂಡಿತು. ಮರಿ ಆನೆಯ ವಯಸ್ಸು ಮೂರು ತಿಂಗಳು. ತಿರುನೆಲ್ಲಿ ರಸ್ತೆಯಲ್ಲಿ ಆನೆಯು ಅಲೆದಾಡುತ್ತಿದ್ದಂತೆ, ಅಲ್ಲಿನ ವಾಹನ ದಟ್ಟಣೆಯಿಂದ ಕಂಗೆಟ್ಟು ಹಿಂದಕ್ಕೆ ಮತ್ತು ಮುಂದಕ್ಕೆ ಆನೆ ಓಡಾಡುತ್ತಿತ್ತು. ಕೆಲವೊಮ್ಮೆ ವಾಹನಗಳನ್ನು ತಡೆಯಲು ಯತ್ನಿಸುತ್ತಿತ್ತು. ಅಲ್ಲದೆ, ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು ಇತರ ವಾಹನಗಳಿಗೆ ಅಡ್ಡ ಬಂದು ತಲೆಯಾಡಿಸುತ್ತಾ ನಿಂತಿತು ಮತ್ತು ಕೆಲವು ಕಾರುಗಳನ್ನು ಮರಿ ಆನೆ ಹಿಂಬಾಲಿಸಿತು.
ಮರಿ ಆನೆಯ ವರ್ತನೆ ಕೆಲವರಿಗೆ ಮನರಂಜನೆ ನೀಡಿದರೆ, ಇನ್ನು ಕೆಲವರು ಅದರ ಯೋಗಕ್ಷೇಮದ ಬಗ್ಗೆ ಚಿಂತಿಸಿದರು. ಎಳೆಯ ಆನೆಯು ತನ್ನ ಹಿಂಡಿನಿಂದ ಬೇರ್ಪಟ್ಟಿದೆಯೇ ಅಥವಾ ಕೈಬಿಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆನೆ ಮರಿ ರಸ್ತೆಯೆಲ್ಲ ಸಂಚರಿಸಿದ ಕಾರಣ ಚಾಲಕರು ತಮ್ಮ ವಾಹನಗಳನ್ನು ಮುಂದಕ್ಕೆ ಚಲಾಯಿಸಲು ಕಾದು ಕುಳಿತಿದ್ದರಿಂದ ಕೆಲ ಕಾಲ ವಾಹನ ಸಂಚಾರವು ಸ್ಥಗಿತಗೊಂಡಿತು.
ಮರಿ ಆನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ತೊಲ್ಪೆಟ್ಟಿ ವನ್ಯಜೀವಿ ಅಭಯಾರಣ್ಯದ ಅರಣ್ಯ ರಕ್ಷಕರು ತಕ್ಷಣ ಸ್ಪಂದಿಸಿ ಅದರ ತಾಯಿಯನ್ನು ಹುಡುಕಲು ಪ್ರಾರಂಭಿಸಿದರು. ಆದರೆ, ಅವರಿಂದ ತಾಯಿ ಆನೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ತಾಯಿಯನ್ನು ಹುಡುಕಿಕೊಂಡು ಆ ಮರಿಯಾನೆ ಅಲೆದಾಡುತ್ತಿತ್ತು ಎಂದು ತಿಳಿದುಬಂದಿದೆ. ಸದ್ಯ ಮರಿ ಆನೆಯನ್ನು ಅರಣ್ಯ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅದರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಹತ್ತಿರದಿಂದ ನಿಗಾವಹಿಸಿದ್ದಾರೆ.