ಮಧೂರು: ಮಧೂರು ಕ್ಷೇತ್ರ ಜೀರ್ಣೋದ್ಧಾರ ಸಮಿತಿಯು ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಿರುವ ಸೇವಾ ಕೇಂದ್ರ ಮತ್ತು ರೆಸ್ಟ್ ರೂಮಿನ ಕಟ್ಟಡದ ಶಂಕು ಸ್ಥಾಪನೆ ಭಾನುವಾರ ನಡೆಯಿತು.ಮಲಬಾರ್ ದೇವಸ್ವಮ್ ಬೋರ್ಡ್ ಅಧ್ಯಕ್ಷ ಎಂ.ಆರ್. ಮುರಳಿ ಶಂಕುಸ್ಥಾಪನೆ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಬಿ.ಎಸ್. ರಾವ್ ಅಧ್ಯಕ್ಷತೆ ವಹಿಸಿದ್ದರು, ತಂತ್ರಿವರ್ಯ ಡಾ. ಶಿವಪ್ರಸಾದ್ ತಂತ್ರಿ ದೇರೆಬೈಲು ಅವರು ಅನುಗ್ರಹ ಭಾಷಣ ಮಾಡಿದರು, ಸಭೆಯಲ್ಲಿ ಕ್ಷೇತ್ರ ಪವಿತ್ರ ಪಾಣಿಗಳಾದ ರತನ್ ಕುಮಾರ್ ಕಾಮಡ, ಮಲಬಾರ್ ದೇವಸ್ವಮ್ ಬೋರ್ಡ್ ಸಹ ಕಮಿಷನರ್ ಪ್ರದೀಪ್ ಕುಮಾರ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕ್ಷೇತ್ರ ನಿರ್ವಹನಾಧಿಕಾರಿ ರಾಜೇಶ್ ಟಿ, ಕೊಡುಗೈದಾನಿ ಕೆ ಕೆ ಶೆಟ್ಟಿ, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್ ಮೊದಲಾದವರು, ಸಮಿತಿ ಪದಾಧಿಕಾರಿಗಳು ಉಪಸ್ಥಿತಿತರಿದ್ದರು. ಗಿರೀಶ್ ಸಂಧ್ಯಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.