ಮಲಪ್ಪುರಂ: ನಾಪತ್ತೆಯಾಗಿದ್ದ ಮಲಪ್ಪುರಂ ತಿರೂರ್ ಉಪ ತಹಸೀಲ್ದಾರ್ ಪಿ.ಬಿ.ಚಾಲಿಬ್ ಮನೆಗೆ ವಾಪಸಾಗಿದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ವಾಪಸ್ ಆಗಮಿಸಿರುವುದಾಗಿ ತಿಳಿದುಬಂದಿದೆ. ಕೆಲಸದ ಒತ್ತಡದ ಕಾರಣ ಮಾನಸಿಕ ಕ್ಷೋಭೆಗಳಿಗೊಳಗಾಗಿ ಊರು ಬಿಟ್ಟು ತೆರಳಿದ್ದಾಗಿ ಚಾಲಿಬ್ ಹೇಳಿದ್ದಾರೆ.
ಮೂರು ದಿನಗಳ ಹಿಂದೆ ಚಾಲಿಬ್ ನಾಪತ್ತೆಯಾಗಿದ್ದರು. ಸಂಜೆ ಕಛೇರಿಯಿಂದ ಹೊರಟು ಮನೆಗೆ ಬರಲು ತಡವಾಗುತ್ತದೆ ಎಂದು ಮನೆಯವರಿಗೆ ಹೇಳಿದ್ದರು. ಆದರೆ ಬಹಳ ಹೊತ್ತಾದರೂ ಚಾಲಿಬ್ ಮನೆಗೆ ಬಾರದೇ ಇದ್ದುದರಿಂದ ಸಂಬಂಧಿಕರು ಪೋಲೀಸರಿಗೆ ದೂರು ನೀಡಿದ್ದರು. ಘಟನೆಯ ತನಿಖೆಯ ಹಂತವೊಂದರಲ್ಲಿ-ನಿನ್ನೆ ಬೆಳಿಗ್ಗೆ ಚಾಲಿಬ್ ತನ್ನ ಪತ್ನಿಗೆ ಪೋನ್‍ನಲ್ಲಿ ಸಂಪರ್ಕಿಸಿದ್ದನು.
ಮಾನಸಿಕ ಸಮಸ್ಯೆಯಿಂದ ಮನೆ ತೊರೆದು ಕರ್ನಾಟಕದಲ್ಲಿ ಇದ್ದೇನೆ ಎಂದು ಪತ್ನಿಗೆ ತಿಳಿಸಿದ್ದರು. ಶೀಘ್ರದಲ್ಲೇ ಮನೆಗೆ ಬರುವುದಾಗಿಯೂ ತಿಳಿಸಿದ್ದರು. ಚಾಲಿಬ್ ರಾತ್ರಿಯೇ ಮಲಪ್ಪುರಂನಲ್ಲಿರುವ ತನ್ನ ಮನೆಗೆ ತಲುಪಿದ್ದು, ಮುಂದಿನ ಕ್ರಮದ ಭಾಗವಾಗಿ ಪೋಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಪ್ರಕರಣವನ್ನು ಮುಕ್ತಾಯಗೊಳಿಸಿ ಬಿಡುಗಡೆ ಮಾಡಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.