ಮೆಲ್ಬರ್ನ್: ಕೆನಡಾದಲ್ಲಿನ ಸಿಖ್ಖರ ಮೇಲೆ ಭಾರತ ದ್ವೇಷ ಸಾಧಿಸುತ್ತಿದೆ ಎಂಬ ಆರೋಪಗಳ ಬಗ್ಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಮಾತುಕತೆ ನಡೆಸಿರುವುದಾಗಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವೋಂಗ್ ಮಂಗಳವಾರ ತಿಳಿಸಿದ್ದಾರೆ.
ಮೆಲ್ಬರ್ನ್: ಕೆನಡಾದಲ್ಲಿನ ಸಿಖ್ಖರ ಮೇಲೆ ಭಾರತ ದ್ವೇಷ ಸಾಧಿಸುತ್ತಿದೆ ಎಂಬ ಆರೋಪಗಳ ಬಗ್ಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಮಾತುಕತೆ ನಡೆಸಿರುವುದಾಗಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವೋಂಗ್ ಮಂಗಳವಾರ ತಿಳಿಸಿದ್ದಾರೆ.
ಸಿಖ್ ಸಮುದಾಯದವರಿಗೆ ಸಂದೇಶ ನೀಡಿದ ಪೆನ್ನಿ ವೋಂಗ್, 'ಆಸ್ಟ್ರೇಲಿಯಾದಲ್ಲಿ ಸಿಖ್ಖರು ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ಬದುಕುವ ಹಕ್ಕನ್ನು ಹೊಂದಿದ್ದಾರೆ' ಎಂದು ತಿಳಿಸಿದ್ದಾರೆ.
'ಆರೋಪಗಳ ಬಗ್ಗೆ ತನಿಖೆ ಮಾಡುವ ನಮ್ಮ ನಿಲುವು ಸ್ಪಷ್ಟವಾಗಿದೆ. ಕೆನಡಾದ ನ್ಯಾಯಾಂಗ ವ್ಯವಸ್ಥೆಯನ್ನು ನಾವು ಗೌರವಿಸುತ್ತೇವೆ' ಎಂದು ಪೆನ್ನಿ ವೋಂಗ್ ಅವರು ಜೈಶಂಕರ್ ಜೊತೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಐದು ದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಜೈಶಂಕರ್ ಅವರು ಆ ದೇಶದ ನಾಯಕರು, ಸಂಸದರು, ಭಾರತೀಯ ಪ್ರತಿನಿಧಿಗಳು, ಉದ್ಯಮಿಗಳು, ಪತ್ರಕರ್ತರು ಮತ್ತು ಚಿಂತಕರ ಜೊತೆ ಸಂವಾದ ನಡೆಸುತ್ತಿದ್ದಾರೆ.
' ನಮ್ಮ ನಿಲುವುಗಳನ್ನು ಭಾರತಕ್ಕೆ ತಿಳಿಸಿದ್ದೇವೆ. ಎಲ್ಲ ದೇಶಗಳ ಕಾನೂನು, ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಯ ಕುರಿತಾಗಿ ನಮ್ಮ ನಿಲುವು ದೃಢವಾಗಿದೆ' ಎಂದು ಹೇಳಿದ್ದಾರೆ.
'ಕೆನಡಾವು ಭಾರತೀಯ ರಾಜತಾಂತ್ರಿಕರನ್ನು ಕಣ್ಗಾವಲಿನಲ್ಲಿಟ್ಟಿದೆ. ಸೂಕ್ತ ಸಾಕ್ಷ್ಯ ನೀಡದೆ ಆರೋಪ ಮಾಡುವ ಚಾಳಿಯನ್ನು ಕೆನಡಾ ಬೆಳೆಸಿಕೊಂಡಿದೆ' ಎಂದು ಜೈಶಂಕರ್ ಹೇಳಿದ್ದಾರೆ.