ಬೆಂಗಳೂರು: ಅವಾಸ್ತವಿಕ ಭರವಸೆಗಳನ್ನು ನೀಡುವುದು ಸುಲಭ, ಆದರೆ ಅವುಗಳನ್ನು ಸರಿಯಾಗಿ ಜಾರಿಗೆ ತರುವುದು ಕಠಿಣ ಅಥವಾ ಅಸಾಧ್ಯ ಎನ್ನುವುದು ಕಾಂಗ್ರೆಸ್‌ಗೆ ಅರಿವಾಗುತ್ತಿದೆ, ಗ್ಯಾರಂಟಿ ಯೋಜನೆಗಳು ಈಡೇರಿಸಲಾಗದ ಸುಳ್ಳುಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಬೆಂಗಳೂರು: ಅವಾಸ್ತವಿಕ ಭರವಸೆಗಳನ್ನು ನೀಡುವುದು ಸುಲಭ, ಆದರೆ ಅವುಗಳನ್ನು ಸರಿಯಾಗಿ ಜಾರಿಗೆ ತರುವುದು ಕಠಿಣ ಅಥವಾ ಅಸಾಧ್ಯ ಎನ್ನುವುದು ಕಾಂಗ್ರೆಸ್‌ಗೆ ಅರಿವಾಗುತ್ತಿದೆ, ಗ್ಯಾರಂಟಿ ಯೋಜನೆಗಳು ಈಡೇರಿಸಲಾಗದ ಸುಳ್ಳುಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಈ ಬಗ್ಗೆ ಅವರು ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ.
'ಪ್ರಚಾರದ ವೇಳೆ ಅವರು ಜನರಿಗೆ ಭರವಸೆಗಳನ್ನು ನೀಡುತ್ತಾರೆ. ಅದನ್ನು ಈಡೇರಿಸಲು ಆಗುವುದಿಲ್ಲ ಎನ್ನುವುದೂ ಅವರಿಗೆ ತಿಳಿದಿದೆ. ಈಗ ಅವರು ಜನರ ಮುಂದೆ ಬೆತ್ತಲಾಗಿದ್ದಾರೆ' ಎಂದು ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕ, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳನ್ನೊಮ್ಮೆ ನೋಡಿ, - ಅಭಿವೃದ್ಧಿಯ ಪಥ ಮತ್ತು ಹಣಕಾಸಿನ ಸ್ಥಿತಿ ಹದಗೆಡುತ್ತಿದೆ. ಅವರು ಗ್ಯಾರಂಟಿಗಳು ಎಂದು ಹೇಳಿಕೊಳ್ಳುವ ಯೋಜನೆಗಳು ಈಡೇರಿಸಲಾಗದ ಸುಳ್ಳುಗಳು. ಇದು ರಾಜ್ಯದ ಜನತೆಗೆ ಅವರು ಮಾಡುತ್ತಿರುವ ಮಹಾಮೋಸ. ಬಡವರು, ಯುವಕರು, ರೈತರು ಹಾಗೂ ಮಹಿಳೆಯರು ಇಂತಹ ರಾಜಕೀಯದ ಸಂತ್ರಸ್ತರು. ಅವರಿಗೆ ನೀಡಲಾದ ಭರವಸೆಗಳ ಪ್ರಯೋಜನ ಸಿಗುತ್ತಿಲ್ಲ, ಅಲ್ಲದೆ ಈಗಿರುವ ಯೋಜನೆಗಳನ್ನೂ ದುರ್ಬಲಗೊಳಿಸಲಾಗುತ್ತಿದೆ' ಎಂದು ಹೇಳಿದ್ದಾರೆ.
'ಕಾಂಗ್ರೆಸ್ ಪ್ರಾಯೋಜಿತ ಸುಳ್ಳು ಭರವಸೆಗಳ ಬಗ್ಗೆ ದೇಶದ ಜನರು ಜಾಗರೂಕರಾಗಿರಬೇಕು. ಹರಿಯಾಣದ ಜನ ಸುಳ್ಳುಗಳನ್ನು ತಿರಸ್ಕರಿಸಿ, ಸ್ಥಿರ, ಅಭಿವೃದ್ಧಿಪರ ಸರ್ಕಾರಕ್ಕೆ ಮಣೆ ಹಾಕಿದ್ದನ್ನು ನಾವು ಇತ್ತೀಚೆಗೆ ನೋಡಿದ್ದೇವೆ. ಕಾಂಗ್ರೆಸ್‌ಗೆ ನೀಡುವ ಮತ ಕೆಟ್ಟ ಆಡಳಿತಕ್ಕೆ, ಕಳಪೆ ಆರ್ಥಿಕತೆ ಮತ್ತು ಸಾಟಿಯಿಲ್ಲದ ಲೂಟಿಗೆ ನೀಡುವ ಮತ ಎಂಬ ಅರಿವು ಭಾರತದಾದ್ಯಂತ ಬೆಳೆಯುತ್ತಿದೆ. ಭಾರತದ ಜನರು ಅಭಿವೃದ್ಧಿ ಮತ್ತು ಪ್ರಗತಿಯನ್ನು ಬಯಸುತ್ತಾರೆ, ಅದೇ ಹಳೆಯ ವಿಷಯಗಳನ್ನಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.