ಈಗಿನ ಮಕ್ಕಳು ಮೊಬೈಲ್, ಟಿವಿ, ವಿಡಿಯೋ ಗೇಮ್ ಹೀಗೆ ಒಂದಲ್ಲಾ ಒಂದು ಗ್ಯಾಜೆಟ್ ಹಿಡಿದು ಕುಳಿತಿರುತ್ತಾರೆ ಅನ್ನೋದು ಎಲ್ಲಾ ಪೋಷಕರ ದೂರಾಗಿರುತ್ತೆ. ಮಕ್ಕಳು ಯಾವಾಗಲು ಪುಸ್ತಕ ಬಿಟ್ಟು ಟಿವಿ, ಮೊಬೈಲ್ ಹಿಡಿದರುತ್ತಾರೆ ಅನ್ನೋದು ಎಲ್ಲರ ಮನೆಯ ಸಾಮಾನ್ಯ ದೂರಾಗಿದೆ. ಆದ್ರೆ ಈಗಂತು ಮಕ್ಕಳಿಗೆ ಆನ್‌ಲೈನ್ ಪಾಠ, ಆನ್‌ಲೈನ್ ನೋಟ್ಸ್, ಅಸೈನ್ ಮೆಂಟ್ ಹೀಗೆ ಒಂದಲ್ಲಾ ಒಂದು ವಿಷಯಕ್ಕೆ ಅವರಿಗೆ ಮೊಬೈಲ್ ಅವಶ್ಯಕತೆ ಬೀಳುತ್ತಿದೆ.
ಇದಿಷ್ಟೆ ಅಲ್ಲ, ಮಕ್ಕಳು ಹೆಚ್ಚು ಹೆಚ್ಚು ಸ್ಕ್ರೀನ್ ಟೈಮ್‌ನಲ್ಲಿ ಅವರ ಓದಿನ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ನಾವು ಅರಿತ್ತಿದ್ದೇವೆ. ಆದ್ರೆ ಮಕ್ಕಳ ಈ ಅಭ್ಯಾಸ ಬಿಡಿಸಲು ನೀವು ಹತ್ತಾರು ರೀತಿಯ ಪ್ರಯತ್ನ ಮಾಡಿರಬಹುದು. ಹಾಗೆ ಈ ರೀತಿಯ ಪ್ರಯತ್ನಗಳಲ್ಲಿ ವಿಫಲರವಾಗಿ ಸುಮ್ಮನಾಗಿರಬಹುದು, ಆದ್ರೆ ಮಕ್ಕಳ ಈ ಅಭ್ಯಾಸ ಅವರ ಯಾವ ರೀತಿಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬುದು ನಿಮಗೆ ಗೊತ್ತಾ?ಬೆಳವಣಿಗೆ ಕುಂಠಿತ
ಹೆಚ್ಚು ಸಮಯ ಮೊಬೈಲ್ ಟಿವಿ ಮುಂದೆ ಕಳೆಯುವುದರಿಂದಾಗಿ ಅವರ ಮೆದುಳಿನ ಬೆಳವಣಿಗೆಯ ಜೊತೆಗೆ ವೋಕಲ್ ಬೆಳವಣಿಗೆ ಕುಂಠಿತವಾಗುತ್ತದೆ. ಅಂದರೆ ಮಕ್ಕಳು ಮಾತುಗಾರಿಕೆ ತಡವಾಗುತ್ತದೆ. ಮಕ್ಕಳು ಸರಿಯಾದ ವಯಸ್ಸಿನಲ್ಲಿ ಮಾತನಾಡಲು ಆರಂಭಿಸುವುದು ತಡವಾಗುತ್ತದೆ. ಇದಕ್ಕೆ ಸ್ಕ್ರೀನ್ ಟೈಮ್ ಕೂಡ ಕಾರಣವಾಗುತ್ತದೆ.
ಸಾಮಾಜಿಕವಾಗಿ ಬೆರೆಯುವಿಕೆ ಮುಂದೂಡುತ್ತಾರೆ
ಮಕ್ಕಳು ಹೆಚ್ಚು ಸಮಯ ಮೊಬೈಲ್, ಟಿವಿ ಮುಂದೆ ಕುಳಿತಿರುವುದು ಅವರ ಸಾಮಾಜಿಕ ಬೆಳವಣಿಗೆಗೆ ಅಡ್ಡಿಪಡಿಸುವಂತೆ ಮಾಡುತ್ತೆ. ಅವರು ಬೇರೆಯವರೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ. ಇದು ಮುಂದೊಂದು ದಿನ ಮಕ್ಕಳಲ್ಲಿ ಫೋಬಿಯಾಗಳಿಗೆ ಕಾರಣವಾಗಬಹುದು. ಮಕ್ಕಳಿಗೆ ಇದು ಸಂಕುಚಿತ ಮನೋಭಾವನೆ ಬೆಳೆಯಲು ಕಾರಣವಾಗಬಹುದು.
ಸಮೀಪ ದೃಷ್ಟಿ ದೋಷ
4ರಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಇತ್ತೀಚಿಗೆ ಹೆಚ್ಚಾಗಿ ಕಂಡುಬರುತ್ತಿರುವ ಸಮಸ್ಯೆಗಳಲ್ಲಿ ಈ ಸಮೀಪ ದೃಷ್ಟಿದೋಷ ಹೆಚ್ಚಾಗುತ್ತಿದೆ, ಇದಕ್ಕೆ ಪ್ರಮುಖ ಕಾರಣವಾಗುತ್ತಿರುವುದು ಮೊಬೈಲ್ ಹಾಗೂ ಟಿವಿ ವೀಕ್ಷಣೆಯ ಸಮಯ. ಮಕ್ಕಳಲ್ಲಿ ಕಣ್ಣಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಮೊಬೈಲ್ ವೀಕ್ಷಣೆಯಿಂದ ಬರುತ್ತದೆ. ಸಮೀಪ ದೃಷ್ಟಿ ದೋಷ ಕೂಡ ಇದರಲ್ಲಿ ಒಂದಾಗಿದೆ.
ಇದೆಲ್ಲದರ ಜೊತೆಗೆ ಅವರ ಮನಸಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆ ಎದುರಿಸುತ್ತಾರೆ.
- ಆತಂಕ ಮತ್ತು ಖಿನ್ನತೆ
- ಗಮನ ಕೊರತೆ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ಎಡಿಎಚ್ಡಿ)
- ನಿದ್ರಾ ಹೀತನೆ
- ಸ್ವಾಭಿಮಾನ ಕಡಿಮೆಯಾಗುವುದು