ಕುಂಬಳೆ: ದೃಷ್ಟಿದೋಷವಿರುವ ವಿದ್ಯಾರ್ಥಿಯೋರ್ವ ಎಲ್ಲಾ ನ್ಯೂನತೆಗಳನ್ನೂ ಗಣನೆಗೆ ತಾರದೆ ರಾಜ್ಯ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದು ನಾಡಿಗೆ ಕೀರ್ತಿ ತಂದಿದ್ದಾನೆ. ಅಂಗಡಿಮೊಗರು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ನಿಯಾಸ್ ಅಹಮ್ಮದ್ ಈ ಸಾಧನೆಗೈದಿದ್ದಾನೆ. ಕೊಚ್ಚಿಯಲ್ಲಿ ನಡೆದ ರಾಜ್ಯ ಶಾಲಾ ಕ್ರೀಡಾಕೂಟದ ಸಬ್ ಜ್ಯೂನಿಯರ್ ಹುಡುಗರ 100 ಮೀಟರ್ ಓಟದಲ್ಲಿ ಈತ ಪ್ರಥಮ ಸ್ಥಾನಗಳಿಸಿದ್ದಾನೆ. ಈತನ ಈ ಸಾಧನೆಯಿಂದ ಕ್ರೀಡಾಕೂಟದಲ್ಲಿ ಕಾಸರಗೋಡಿಗೆ ಮೊದಲ ಚಿನ್ನ ದೊರಕಿದೆ. 100 ಮೀಟರ್ ಓಟವನ್ನು ಕೇವಲ 12.40 ಸೆಕುಂಡುಗಳಲ್ಲಿ ನಿಯಾಸ್ ಅಹಮ್ಮದ್ ಪೂರ್ತಿಗೊಳಿಸಿದ್ದಾನೆ. ಆವೇಶಭರಿತ ಈ ಸ್ಪರ್ಧೆಯಲ್ಲಿ ಕೊಲ್ಲಂನ ವಿದ್ಯಾರ್ಥಿಯಾದ ಸೌರವ್‍ನನ್ನು ಈತ ಹಿಂದಿಕ್ಕಿದ್ದಾನೆ.
ಚಿಕ್ಕಂದಿನಿಂದಲ್ಲೇ ಓದಲು, ಬರೆಯಲು ಹಾಗೂ ನಡೆದಾಡಲು ಕಷ್ಟಪಡುತ್ತಿದ್ದ ಬಾಲಕನನ್ನು ಮನೆಯವರು ವೈದ್ಯರಲ್ಲಿಗೆ ಕರೆದೊಯ್ದು ತಪಾಸಣೆ ನಡೆಸಿದಾಗ ನಿಯಾಸ್ ಅಹಮ್ಮದ್‍ಗೆ 50 ಶೇಕಡಾದಷ್ಟು ದೃಷ್ಟಿದೋಷ ಪತ್ತೆಯಾಗಿತ್ತು. ಹಲವು ಚಿಕಿತ್ಸೆ ನೀಡಿದರೂ ದೃಷ್ಟಿÉೂೀಷ ಪರಿಹರಿಸಲಾಗಲಿಲ್ಲ. ಇದರಿಂದ ಹೆಚ್ಚು ಸಾಮಥ್ರ್ಯದ ಕನ್ನಡಕ ಬಳಸಬೇಕಾಗಿ ಬಂತು. ಕನ್ನಡಕ ತೆಗೆದರೆ ಹತ್ತಿರವಿರುವ ವಸ್ತುಗಳೂ ಗೋಚರಿಸದ ಸ್ಥಿತಿ ಈತನದ್ದಾಗಿದೆ. ಹಾಗಿದ್ದರೂ ಕ್ರೀಡಾಕೂಟದ ಟ್ರಾಕ್‍ನಲ್ಲಿ ಅದೆಲ್ಲವನ್ನೂ ಪರಾಭವಗೊಳಿಸಿ ತಾನೊಬ್ಬ ಸಮರ್ಥ ಓಟಗಾರನೆಂದು ಈತ ತೋರಿಸಿಕೊಟ್ಟಿದ್ದಾನೆ.
ಅಂಗಡಿಮೊಗರು ಬಳಿಯ ಬಕ್ಕಂವಳಪ್ಪ್ ಎಂಬಲ್ಲಿನ ಅಬ್ದುಲ್ ಹಮೀದ್- ನಸೀಮ ದಂಪತಿಯ ಪುತ್ರನಾಗಿದ್ದಾನೆ ಕ್ರೀಡಾಕೂಟದಲ್ಲಿ ಸಾಧನೆಗೈದ ನಿಯಾಸ್ ಅಹಮ್ಮದ್.
ಈತನ ಸಹೋದರ ಸಹೋದರಿಯರಾದ ನುಫೈಸ್ (ಪ್ಲಸ್‍ಟು ವಿದ್ಯಾರ್ಥಿ), ನಾಫಿ (3ನೇ ತರಗತಿ) ನುಸೀಬ ಮರಿಯಂ (2ನೇ ತರಗತಿ) ಎಂಬಿವರು ಕೂಡಾ ಅಂಗಡಿಮೊಗರು ಜಿಎಚ್‍ಎಸ್‍ಎಸ್‍ನ ವಿದ್ಯಾರ್ಥಿಗಳಾಗಿದ್ದಾರೆ. ಚಿನ್ನದ ಸಾಧನೆಗೈದು ಊರಿಗೆ ಮರಳುತ್ತಿರುವ ನಿಯಾಸ್ ಅಹಮ್ಮದ್ ನಿಗೆ ಶನಿವಾರ ಮಧ್ಯಾಹ್ನ ಕಾಸರಗೋಡು ರೈಲು ನಿಲ್ದಾಣದಲ್ಲಿ ಶಾಲಾ ಪಿಟಿಎ, ನಾಡಿನ ಕ್ಲಬ್‍ಗಳು ಹಾಗೂ ನಾಗರಿಕರು ಅದ್ದೂರಿಯ ಸ್ವಾಗತ ನೀಡಿದರು.