ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ವಿಜ್ಞಾನೋತ್ಸವ ಸಮಾರೋಪ ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಜರಗಿತು. ವರ್ಕಾಡಿ ಗ್ರಾ.ಪಂ.ಅಧ್ಯಕ್ಷೆ ಭಾರತಿ ಎಸ್. ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮೀಂಜ ಗ್ರಾ.ಪಂ.ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ಸಮಾರೋಪ ಉದ್ಘಾಟಿಸಿದರು. ಬ್ಲಾ.ಪಂ.ಉಪಾಧ್ಯಕ್ಷ ಮುಹಮ್ಮದ್ ಅನೀಫ್ ಪಿ.ಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸದಸ್ಯ ಮೊಯಿದ್ದೀನ್ ಕುಂಞ, ಅಬ್ದುಲ್ ಹಮೀದ್ ಶುಭ ಹಾರೈಸಿದರು. ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ. ಬಹುಮಾನ ವಿತರಿಸಿ ಶುಭ ಹಾರೈಸಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ ಕೆ., ಮೀಂಜ ಪಂಚಾಯತಿ ಮತ್ತು ವರ್ಕಾಡಿ ಪಂಚಾಯತಿ ಸದಸ್ಯರು ಶಾಲಾ ಸಂಚಾಲಕÀ ವಂದನೀಯ ಸ್ವಾಮಿ ಬೇಸಿಲ್‍ವಾಸ್ ಹಾಗು ಇತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಕೃಷ್ಣವೇಣಿ ಸ್ವಾಗತಿಸಿ, ರೋಮನ್ ಡಿಸೋಜ ವಂದಿಸಿದರು. ಬಶೀರ್ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.
ವಿಜ್ಞಾನ ಮೇಳದ ಎಲ್.ಪಿ.ವಿಭಾಗದಲ್ಲಿ ಯಂ.ಎ.ಎಲ್.ಪಿ.ಎಸ್ ಕುಂಜತ್ತೂರು ಪ್ರಥಮ, ಸೈಂಟ್ಸ್ ಜೋಸೆಫ್ ಎ.ಯು.ಪಿ.ಎಸ್ ಕಳಿಯೂರು ದ್ವಿತೀಯ. ಯು.ಪಿ ವಿಭಾಗದಲ್ಲಿ ಜಿ.ಹೆಚ್.ಎಸ್.ಎಸ್ ಹೇರೂರು ಮೀಪ್ರಿ ಪ್ರಥಮ, ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ ದ್ವಿತೀಯ. ಹೈಸ್ಕೂಲ್ ವಿಭಾಗದಲ್ಲಿ ಜಿ.ಹೆಚ್.ಎಸ್.ಎಸ್ ಹೇರೂರು ಮೀಪ್ರಿ ಪ್ರಥಮ, ಎಸ್.ಡಿ.ಪಿ.ಹೆಚ್.ಎಸ್ ಧರ್ಮತಡ್ಕ ದ್ವಿತೀಯ, ಜಿ.ಎಚ್.ಎಸ್.ಎಸ್.ಮಂಗಲ್ಪಾಡಿ ದ್ವಿತೀಯ. ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಸ್.ಎ.ಟಿ.ಎಚ್.ಎಸ್.ಮಂಜೇಶ್ವರ ಪ್ರಥಮ ಜಿ.ಹೆಚ್.ಎಸ್.ಎಸ್ ಪೈವಳಿಕೆ ನಗರ ದ್ವಿತೀಯ, ಗಣಿತ ಮೇಳದ ಎಲ್.ಪಿ. ವಿಭಾಗದಲ್ಲಿ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ ಪ್ರಥಮ, ಎಮ್.ಎ.ಎಲ್.ಪಿ.ಎಸ್ ಕುಂಜತ್ತೂರು ದ್ವಿತೀಯ, ಎಸ್.ಎಸ್.ಎ.ಎಲ್.ಪಿ.ಎಸ್ ಕನಿಯಾಲ ದ್ವಿತೀಯ, ಯು.ಪಿ.ವಿಭಾಗದಲ್ಲಿ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ ಪ್ರಥಮ, ಎಸ್.ಎ.ಟಿ.ಹೆಚ್.ಎಸ್ ಮಂಜೇಶ್ವರ ದ್ವಿತೀಯ. ಹೈಸ್ಕೂಲ್ ವಿಭಾಗದಲ್ಲಿ ಎಸ್.ಡಿ.ಪಿ.ಎಚ್.ಎಸ್ ಧರ್ಮತಡ್ಕ ಪ್ರಥಮ, ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ ದ್ವಿತೀಯ, ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ ಪ್ರಥಮ, ಜಿ.ವಿ.ಹೆಚ್.ಎಸ್.ಎಸ್ ಕುಂಜತ್ತೂರು ದ್ವಿತೀಯ, ಸಮಾಜ ವಿಜ್ಞಾನ ಮೇಳದ ಯು.ಪಿ.ವಿಭಾಗದಲ್ಲಿ ಸೈಂಟ್ ಜೋಸೆಫ್ ಎ.ಯು.ಪಿ.ಎಸ್ ಕಳಿಯೂರು ಪ್ರಥಮ, ಎಸ್.ಎಸ್.ಬಿ.ಎ.ಯು.ಪಿ.ಎಸ್ ಐಲ ದ್ವಿತೀಯ.ಎಲ್.ಪಿ.ವಿಭಾಗದಲ್ಲಿ ಎಸ್.ಎಸ್.ಬಿ.ಎ.ಯು.ಪಿ.ಎಸ್ ಐಲ ಪ್ರಥಮ, ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ ಪ್ರಥಮ, ವಿ.ಎ.ಎಲ್.ಪಿ.ಎಸ್ ಪಾವೂರು ದ್ವಿತೀಯ. ಹೈಸ್ಕೂಲ್ ವಿಭಾಗದಲ್ಲಿ ಎಸ್.ಡಿ.ಪಿ.ಎಚ್.ಎಸ್ ಧರ್ಮತಡ್ಕ ಪ್ರಥಮ, ಜಿ.ಎಚ್.ಎಸ್.ಎಸ್.ಪೈವಳಿಕೆ ನಗರ ದ್ವಿತೀಯ. ಹೆಚ್.ಎಸ್.ಎಸ್. ವಿಭಾಗದಲ್ಲಿ ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ ಪ್ರಥಮ, ಜಿ.ಎಚ್.ಎಸ್.ಎಸ್.ಪೈವಳಿಕೆ ನಗರ ದ್ವಿತೀಯ,
ವೃತ್ತಿ ಪರಿಚಯ ಮೇಳದ ಎಲ್.ಪಿ.ವಿಭಾಗದಲ್ಲಿ ಎ.ಯು.ಪಿ.ಎಸ್ ಬಾಕ್ರಬೈಲ್ ಪ್ರಥಮ, ಜಿ.ಎಲ್.ಪಿ.ಎಸ್ ಕುಳೂರು ದ್ವಿತೀಯ. ಯು.ಪಿ. ವಿಭಾಗದ ಎ.ಯು.ಪಿ.ಎಸ್ ಬಾಕ್ರಬೈಲ್ ಪ್ರಥಮ, ಎ.ಯು.ಪಿ.ಎಸ್ ಆನೆಕಲ್ಲು ದ್ವಿತೀಯ, ಎಸ್.ಆರ್.ಎ.ಯು.ಪಿ.ಎಸ್ ಕುಬಣೂರು ದ್ವಿತೀಯ, ವಿ.ಎ.ಯು.ಪಿ.ಎಸ್. ಮೀಯಪದವು ದ್ವಿತೀಯ, ಹೈಸ್ಕೂಲ್‍ವಿಭಾಗದ ಜಿ.ಹೆಚ್.ಎಸ್. ಕಡಂಬಾರು ಪ್ರಥಮ, ಎಸ್.ಡಿ.ಪಿ.ಎಚ್.ಎಸ್. ಧರ್ಮತಡ್ಕ ದ್ವಿತೀಯ., ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಸ್.ಎ.ಟಿ.ಎಚ್.ಎಸ್. ಮಂಜೇಶ್ವರ ಪ್ರಥಮ, ಎಸ್.ಡಿ.ಪಿ.ಎಚ್.ಎಸ್ ಧರ್ಮತಡ್ಕ ದ್ವಿತೀಯ, ಐಟಿ ಮೇಳದ ಯು.ಪಿ ವಿಭಾಗದಲ್ಲಿ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ ಪ್ರಥಮ, ಎಸ್.ಆರ್.ಎ.ಯು.ಪಿ.ಎಸ್ ಕುಬಣೂರು ದ್ವಿತೀಯ, ಹೈಸ್ಕೂಲ್ ವಿಭಾಗದಲ್ಲಿ ಸಿರಾಜುಲ್ ಹುದ ಇ.ಎಮ್.ಎಚ್.ಎಸ್ ಉದ್ಯಾವರ ಪ್ರಥಮ, ಎಸ್.ಎ.ಟಿ.ಎಚ್.ಎಸ್. ಮಂಜೇಶ್ವರ ದ್ವಿತೀಯ, ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಸ್.ಎ.ಟಿ.ಎಚ್.ಎಸ್. ಮಂಜೇಶ್ವರ ಪ್ರಥಮ, ಜಿ.ಎಚ್.ಎಸ್.ಎಸ್.ಪೈವಳಿಕೆ ನಗರ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿದೆ.