ನವದೆಹಲಿ:ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿನ ಅಕ್ರಮಗಳ ಕುರಿತು ಕಾಂಗ್ರೆಸ್ ಪಕ್ಷವು ನೀಡಿದ ದೂರಿಗೆ ಪ್ರತಿಕ್ರಿಯಿಸಿರುವ ಆಯೋಗದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷವು, ಆಯೋಗದ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
ನವದೆಹಲಿ:ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿನ ಅಕ್ರಮಗಳ ಕುರಿತು ಕಾಂಗ್ರೆಸ್ ಪಕ್ಷವು ನೀಡಿದ ದೂರಿಗೆ ಪ್ರತಿಕ್ರಿಯಿಸಿರುವ ಆಯೋಗದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷವು, ಆಯೋಗದ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
ಚುನಾವಣಾ ಆಯೋಗವು ಪಕ್ಷ ಮತ್ತು ತನ್ನ ನಾಯಕರ ಮೇಲೆ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಂಗಳವಾರ, ಕಾಂಗ್ರೆಸ್ ನ ದೂರಿಗೆ ಉತ್ತರಿಸಿದ ಚುನಾವಣಾ ಆಯೋಗವು, ಪಕ್ಷವು ಚುನಾವಣಾ ಫಲಿತಾಂಶ ತನ್ನ ವಿರುದ್ಧ ಇದ್ದಾಗ ಆಧಾರರಹಿತ ಆರೋಪಗಳನ್ನು ಮಾಡಿದೆ ಎಂದು ಟೀಕಿಸಿತ್ತು. ಅಲ್ಲದೇ, ಆಧಾರರಹಿತ ಮತ್ತು ಸಂವೇದನಾಶೀಲ ಆರೋಪ ಮಾಡದಂತೆಯೂ ಎಚ್ಚರಿಕೆ ನೀಡಿತ್ತು.
ಚುನಾವಣಾ ಆಯೋಗವು ಕಾಂಗ್ರೆಸ್ ಪಕ್ಷವು ಮಾಡಿರುವ ಆರೋಪಗಳನ್ನು ಬೇಜವಾಬ್ದಾರಿ ಎಂದು ಹೇಳಿತ್ತು. ಹರಿಯಾಣದಲ್ಲಿ ಚುನಾವಣಾ ಪ್ರಕ್ರಿಯೆಯು ದೋಷರಹಿತವಾಗಿ ನಡೆದಿದೆ. ಕ್ಷುಲ್ಲಕ ದೂರುಗಳ ಪ್ರವೃತ್ತಿಯನ್ನು ನಿಲ್ಲಿಸುವಂತೆ ಆಯೋಗವು ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿತ್ತು.
ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಕಾಂಗ್ರೆಸ್, ಪಕ್ಷವು ಚುನಾವಣಾ ಆಯೋಗವನ್ನು ಗೌರವಿಸುತ್ತದೆ. ಪತ್ರ ಸಂವಹನವು ವಿಧಾನಸಭಾ ಚುನಾವಣೆಯಲ್ಲಿನ ಸಮಸ್ಯೆಗಳಿಗೆ ಸೀಮಿತವಾಗಿ ಮಾಡಲಾಗಿತ್ತು. ಪ್ರಸಕ್ತ ಚುನಾವಣಾ ಆಯೋಗದ ಹೇಳಿಕೆಗಳು, ಆಯೋಗವು ತನ್ನ ತಟಸ್ಥ ನಿಲುವಿನಿಂದ ದೂರ ಉಳಿದಿರುವಂತೆ ಕಂಡು ಬರುತ್ತಿದೆ. ಆ ಮೂಲಕ ತನ್ನ ಕರ್ತವ್ಯವನ್ನು ಆಯೋಗವು ಮರೆತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ತನ್ನ ದೂರಿಗೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗವು ನೀಡಿರುವ ಹೇಳಿಕೆಯಲ್ಲಿ ಬಳಸಿರುವ ಭಾಷೆ ಮತ್ತು ಪಕ್ಷದ ವಿರುದ್ಧ ಮಾಡಿದ ಆರೋಪಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷವು, ಈ ವಿಚಾರದಲ್ಲಿ ಚುನಾವಣಾ ಆಯೋಗವು ತನಗೇ ತಾನು ಕ್ಲೀನ್ ಚಿಟ್ ನೀಡಿದರೂ ಆಶ್ಚರ್ಯವಿಲ್ಲ ಎಂದು ವ್ಯಂಗ್ಯವಾಡಿದೆ.