HEALTH TIPS

ಒಂದೇ ಶಾಲಿನಿಂದ ತಯಾರಿಸಿದ ನೇಣಿಗೆ ಕೊರಳೊಡ್ಡಿ ಪ್ರಾಣಬಿಟ್ಟ ಪ್ರೇಮಿಗಳು

ಕಾಸರಗೋಡು: ವೆಳ್ಳರಿಕುಂಡು ಪೊಲೀಸ್ ಠಾಣೆ ವ್ಯಾಪ್ತಿಯ ಪರಪ್ಪ ಪುಲಿಯಂಕುಳಂನ ಜನವಾಸವಿಲ್ಲದ ಮನೆಯೊಂದರಲ್ಲಿ ಹದಿನೇಳರ ಹರೆಯದ ವಿದ್ಯಾರ್ಥಿನಿ ಹಾಗೂ ಈಕೆ ಪ್ರಿಯತಮ ಒಂದೇ ಶಾಲಿನಲ್ಲಿ ಎರಡು ಕುಣಿಕೆ ಮಾಡಿ ನೇಣಿಗೆ ಶರಣಾಗಿದ್ದಾರೆ.

ಇಲ್ಲಿನ ನೆಲ್ಲಿಯರ ನಿವಾಸಿ ರಾಜೇಶ್(24) ಹಾಗೂ ಮಾಲೋತ್ ಕಸಬಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಪ್ಲಸ್‍ಟು ವಿದ್ಯಾರ್ಥಿನಿ ಹಾಗೂ ಎಡತ್ತೋಡ್ ಪಯಾಳ ನಿವಾಸಿ ಲಾವಣ್ಯ(17)ಸಾವಿಗೆ ಶರಣಾದವರು. ಇವರಿಬ್ಬರೂ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಮನೆಯಿಂದ ಹೊರಟಿದ್ದ ಲಾವಣ್ಯ ಸ್ನೇಹಿತೆಯೊಂದಿಗೆ ಪರಪ್ಪ ತೆರಳಿದ್ದು, ಅಲ್ಲಿಂದ ರಾಜೇಶ್ ಜತೆ ತೆರಳಿದ್ದಾಳೆ. ಅಲ್ಲಿನ ಕಮ್ಯೂನಿಟಿ ಹಾಲ್ ಸನಿಹ ಮಾತನಾಡುತ್ತಿದ್ದ ಇಬ್ಬರೂ ಅಲ್ಲಿಂದ ನೆಲ್ಲಿಯರದ ಜನವಾಸವಿಲ್ಲದ ಮನೆಗೆ ತೆರಳಿರುವುದನ್ನು ಆಸುಪಾಸಿನವರು ನೋಡಿದ್ದರು. ಬಹಳ ಹೊತ್ತಿನ ವರೆಗು ಇವರು ವಾಪಸಾಗದ ಹಿನ್ನೆಲೆಯಲ್ಲಿ ನೋಡಿದಾಗ ನೇಣಿಗೆ ಶರಣಾಗಿರುವುದು ಕಂಡು ಬಂದಿತ್ತು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕಾಞಂಗಾಡು ಡಿವೈಎಸ್‍ಪಿ ಬಾಬು ಪೆರಿಙÉೂೀತ್ ನೇತೃತ್ವದಲ್ಲಿ ವೆಳ್ಳರಿಕುಂಡು ಇನ್ಸ್‍ಪೆಕ್ಟರ್ ಮುಕುಂದನ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries