ಕೊಚ್ಚಿ : ಮಲಯಾಳ ಸಿನಿಮಾ ಕ್ಷೇತ್ರದ ಹಲವು ಪ್ರಮುಖ ನಟರ ವಿರುದ್ಧ ದಾಖಲಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ವಾಪಸ್ ಪಡೆಯುದಾಗಿ ಹೇಳಿದ್ದ 51 ವರ್ಷ ನಟಿ, ತಮ್ಮ ನಿರ್ಧಾರದಿಂದ ಹಿಂದೆ ಸರಿದ್ದಾರೆ.
ಈ ದೂರುಗಳನ್ನು ವಾಪಸ್ ಪಡೆಯುವುದಿಲ್ಲ ಎಂದು ಭಾನುವಾರ ಅವರು ತಿಳಿಸಿದ್ದಾರೆ.
ಸರ್ಕಾರದಿಂದ ಬೆಂಬಲ ಲಭಿಸದ ಕಾರಣ ದೂರುಗಳನ್ನು ಹಿಂಡೆಯಲು ನಿರ್ಧರಿಸಿದ್ದೇನೆ' ಎಂದು ಎರಡು ದಿನಗಳ ಹಿಂದಷ್ಟೇ ಅವರು ಘೋಷಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹೋರಾಟವನ್ನು ಮುಂದುವರಿಸಲು ನನ್ನ ಪತಿ ಮತ್ತು ಕುಟುಂಬಸ್ಥರು ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ ನನ್ನ ನಿರ್ಧಾರವನ್ನು ಬದಲಾಯಿಸಿದೆ' ಎಂದು ತಿಳಿಸಿದರು.
ಸಿಪಿಎಂ ಶಾಸಕ ಎಂ.ಮುಕೇಶ್ ಸೇರಿದಂತೆ ಹಲವು ನಟರ ವಿರುದ್ಧ ನಟಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.