ನವದೆಹಲಿ: ಮಹಾರಾಷ್ಟ್ರದ ಚುನಾವಣಾ ಪ್ರಚಾರ ಸಭೆ ರದ್ದುಗೊಳಿಸಿ ಭಾನುವಾರ ಬೆಳಿಗ್ಗೆ ರಾಜಧಾನಿಗೆ ವಾಪಸಾದ, ಗೃಹ ಸಚಿವ ಅಮಿತ್ ಶಾ, ಹಿಂಸಾಚಾರ ಪೀಡಿತ ಮಣಿಪುರದ ಪರಿಸ್ಥಿತಿ, ಭದ್ರತಾ ವ್ಯವಸ್ಥೆ ಕುರಿತು ಸಭೆ ನಡೆಸಿದರು.
ನವದೆಹಲಿ: ಮಹಾರಾಷ್ಟ್ರದ ಚುನಾವಣಾ ಪ್ರಚಾರ ಸಭೆ ರದ್ದುಗೊಳಿಸಿ ಭಾನುವಾರ ಬೆಳಿಗ್ಗೆ ರಾಜಧಾನಿಗೆ ವಾಪಸಾದ, ಗೃಹ ಸಚಿವ ಅಮಿತ್ ಶಾ, ಹಿಂಸಾಚಾರ ಪೀಡಿತ ಮಣಿಪುರದ ಪರಿಸ್ಥಿತಿ, ಭದ್ರತಾ ವ್ಯವಸ್ಥೆ ಕುರಿತು ಸಭೆ ನಡೆಸಿದರು.
ಹಿರಿಯ ಅಧಿಕಾರಿಗಳಿಂದ ವಸ್ತುಸ್ಥಿತಿ ವಿವರ ಪಡೆದ ಅವರು ಈಶಾನ್ಯ ರಾಜ್ಯದಲ್ಲಿ ಶಾಂತಿಯುತ ವಾತಾವರಣ ಸ್ಥಾಪಿಸಲು ಕೈಗೊಳ್ಳಬೇಕಿರುವ ಕ್ರಮಗಳನ್ನು ಕುರಿತು ಚರ್ಚಿಸಿದರು.
ಹಿರಿಯ ಭದ್ರತಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ಸಚಿವರು ಮಣಿಪುರದ ವಸ್ತುಸ್ಥಿತಿ ಪರಿಶೀಲಿಸಿದರು ಎಂದು ಮೂಲಗಳು ದೃಢಪಡಿಸಿವೆ.
ಜನಾಂಗೀಯ ಘರ್ಷಣೆಯಿಂದ ಒಂದು ವರ್ಷದಿಂದ ತತ್ತರಿಸಿರುವ ಮಣಿಪುರದಲ್ಲಿ ಈಚೆಗೆ ಬುಡಕಟ್ಟು ಉಗ್ರರು ನಡೆಸಿದ ದಾಳಿಯಿಂದ ಮೂವರು ಮಹಿಳೆಯರು, ಒಬ್ಬ ಬಾಲಕ ಸೇರಿ ಆರು ಜನರು ಮೃತಪಟ್ಟಿದ್ದರು. ಇದರ ಹಿಂದೆಯೇ ಐದು ಜಿಲ್ಲೆಗಳಲ್ಲಿ ಹಿಂಸೆ ಹೆಚ್ಚಿದ್ದು, ಉದ್ವಿಗ್ವಸ್ಥಿತಿ ಮೂಡಿದೆ.