ಪತ್ತನಂತಿಟ್ಟ: ಶಬರಿಮಲೆ ಯಾತ್ರೆಗೈದ ಸ್ವಾಮಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ವಿಜಯಪುರಂ ಮೂಲದ ಮುರುಕಾಚಾರಿ (40) ಮೃತರು.
ಶಬರಿಮಲೆ ಏರುತ್ತಿದ್ದಾಗ ನೀಲಿಮಲಾ ಪ್ರದೇಶದಲ್ಲಿ ಕುಸಿದು ಬಿದ್ದಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದರೂ ಪ್ರಾಣ ಉಳಿಸಲಾಗಲಿಲ್ಲ.
ಭಾನುವಾರ ಸಂಜೆ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ಗುಂಪಿನೊಂದಿಗೆ ಪಂಪಾದಿಂದ ಶಬರಿಮಲೆಗೆ ಪ್ರಯಾಣಿಸುತ್ತಿದ್ದಾಗ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಮಹಜರು ಪ್ರಕ್ರಿಯೆ ಪೂರ್ಣಗೊಂಡ ನಂತರ, ಅಂತ್ಯಕ್ರಿಯೆಗಾಗಿ ಆಂಧ್ರಕ್ಕೆ ಮೃತದೇಹ ಕೊಂಡೊಯ್ಯಲಾಗುತ್ತದೆ.