HEALTH TIPS

ಹೃದ್ರೋಗ ಚಿಕಿತ್ಸಾ ಯಂತ್ರಗಳಿಗೆ ಸುಧಾರಿತ ತಂತ್ರಜ್ಞಾನ; ಐಐಟಿಯಿಂದ ಅಭಿವೃದ್ಧಿ

ಇಂದೋರ್: ಇ.ಸಿ.ಜಿ (ಎಲೆಕ್ಕೊ ಕಾರ್ಡಿಯೋಗ್ರಾಮ್) ಯಂತ್ರ ಹಾಗೂ ಹೃದಯದ ಬಡಿತವನ್ನು ಸುಸ್ಥಿತಿಯಲ್ಲಿಡುವ ಉಪಕರಣಗಳ (ಪೇಸ್‌ಮೇಕರ್ಸ್) ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸುಧಾರಿತ ತಂತ್ರಜ್ಞಾನವನ್ನು ಇಂದೋರ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಅಭಿವೃದ್ಧಿಪಡಿಸಿದೆ. 



ಪ್ರೊ ಅನಿರ್ಬನ್ ಸೇನ್‌ಗುಪ್ತಾ ನೇತೃತ್ವದ ತಂಡವು ಈ ನವೀನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಈ ಸಂಬಂಧ
ಹಕ್ಕುಸ್ವಾಮ್ಯವನ್ನೂ (ಪೇಟೆಂಟ್) ಪಡೆದುಕೊಂಡಿದೆ. 'ಇ.ಸಿ.ಜಿ ಯಂತ್ರ ಹಾಗೂ ಪೇಸ್‌ಮೇಕರ್‌ಗಳಿಗೆ ಈ ಸುಧಾರಿತ ತಂತ್ರಜ್ಞಾನವುಳ್ಳ ಚಿಪ್‌ಗಳನ್ನು ಅಳವಡಿಸಲಾಗುವುದು. ಇದರಿಂದ ಈ ಯಂತ್ರಗಳ ದಕ್ಷತೆ ಸುಧಾರಿಸಲಿದ್ದು ತಪ್ಪಾಗಿ ರೋಗನಿರ್ಣಯವಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಲಿದೆ. ಈ ಮೂಲಕ ರೋಗಿಗಳಿಗೆ ಅಸಮರ್ಪಕ ಚಿಕಿತ್ಸೆ ನೀಡುವುದು ತಪ್ಪಲಿದೆ' ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಈ ತಂತ್ರಜ್ಞಾನವು ಇ.ಸಿ.ಜಿ ಯಂತ್ರಗಳಲ್ಲಿ ಸಕಲಿ ಚಿಪ್‌ಗಳ ಅಳವಡಿಕೆಯನ್ನು ತಪ್ಪಿಸಲಿದೆ ಹೃದ್ರೋಗಗಳ ಚಿಕಿತ್ಸೆಗೆ ಬಳಸಲಾಗುವ ಉಪಕರಣಗಳ ದಕ್ಷತೆ, ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯನ್ನು ಬಲಪಡಿಸಲಿದ್ದು ನ್ಯೂನತೆಗಳನ್ನು ಸರಿಪಡಿಸಲಿದೆ ಎಂದು ಪ್ರೊ.ಸೇನ್ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries