ಪೆರ್ಲ: ಉದಿನೂರು ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲಾ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಹಿಮ್ಮೇಳ ಗುರುಗಳಾದ ನಾರಾಯಣ ಶರ್ಮ ನೀರ್ಚಾಲು, ಚೆಂಡೆಯಲ್ಲಿ ಹಿಮ್ಮೇಳ ಗುರುಗಳಾದ ವರ್ಷಿತ್ ಕಿಜ್ಜೆಕ್ಕಾರು, ಮದ್ದಳೆಯಲ್ಲಿ ಪೃಥ್ವಿರಾಜ್ ಪೆರುವೋಡಿ, ಚಕ್ರತಾಳದಲ್ಲಿ ಬಾಲಕೃಷ್ಣ ಏಳ್ಕಾನ, ರಂಗಸಜ್ಜಿಕೆಯಲ್ಲಿ ಪ್ರದೀಶ್ ರಾಜ್ ವಾಟೆ, ಹರ್ಷ ಸಜಂಗದ್ದೆ, ಅಧ್ಯಾಪಕರಾದ ಚಂದ್ರಹಾಸ ಕಾಟುಕುಕ್ಕೆ, ಶಿವರಾಮ ಅರಿಕ್ಕಾಡಿ, ಹರಿಪ್ರಸಾದ್ ಮಾಯಿಲೆಂಗಿ, ವೇಷಭೂಷಣದಲ್ಲಿ ಶ್ರೀ ದುರ್ಗಾಂಬ ವೇಷಭೂಷಣ ಮಲ್ಲ ಸಹಕರಿಸಿದರು.
ಪಾತ್ರವರ್ಗದಲ್ಲಿ ಅರ್ಜುನ - ಹರ್ಷಲ್ ಮಾಯಿಲೆಂಗಿ, ವೃಷಕೇತು - ಆತ್ಮೀಕ್ ಅರಿಕ್ಕಾಡಿ, ಬಭ್ರುವಾಹನ - ಸ್ಕಂದ ಕಾಟುಕುಕ್ಕೆ, ಮಂತ್ರಿ - ಧನುಷ್ ನಲ್ಕ, ಚಿತ್ರಾಂಗದೆ - ಧನುಷ್ ಮಾಯಿಲೆಂಗಿ, ಅನುಸಾಲ್ವ - ಹೃತೇಶ್ ಬಾಳೆಮೂಲೆ, ಕೃಷ್ಣ - ಲಿಖಿತ್ ಬಾಳೆಮೂಲೆ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಳೆದ ವರ್ಷ ಈ ಶಾಲಾ ತಂಡ ರಾಜ್ಯ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದಿತ್ತು.
ಯಕ್ಷ ಕಲಾಭಿಮಾನಿಗಳ ಹಾರೈಕೆಗಳೊಂದಿಗೆ......