ಕಾಸರಗೋಡು: ಜಿಲ್ಲಾ ಮಣ್ಣು ಪರಿಶೋಧನೆ ಮತ್ತು ಮಣ್ಣು ಸಂರಕ್ಷಣಾ ಇಲಾಖೆ ವತಿಯಿಂದ ಡಿಸೆಂಬರ್ 5ರಂದು ನಡೆಯುವ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಜಿಲ್ಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಜಲವರ್ಣ ಚಿತ್ರಕಲಾ ಸ್ಪರ್ಧೆಯನ್ನು ವಿವಿಧ ದಿನಗಳಲ್ಲಿ ಆಯೋಜಿಸಲಾಗಿದೆ.
ನವೆಂಬರ್ 23 ರಂದು ಬೆಳಗ್ಗೆ 10.30ಕ್ಕೆ ವೆಳ್ಳರಿಕುಂಡು, ಹೊಸದುರ್ಗ ತಾಲೂಕಿನ ವಿದ್ಯಾರ್ಥಿಗಳಿಗೆ ಹೊಸದುರ್ಗ ಸರ್ಕಾರಿ ಎಚ್‍ಎಸ್‍ಎಸ್‍ನಲ್ಲಿ, ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನ ವಿದ್ಯಾರ್ಥಿಗಳಿಗೆ ಕಾಸರಗೋಡಿನ ಬಿ.ಇ.ಎಂ.ಎಚ್‍ಎಸ್‍ಎಸ್‍ನಲ್ಲಿ ನವೆಂಬರ್ 30 ರಂದು ಬೆಳಗ್ಗೆ 10.30 ಕ್ಕೆ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಭಾಗವಹಿಸುವ ಮಕ್ಕಳು ಮುಖ್ಯೋಪಾಧ್ಯಾಯರ ಅನುಮತಿ ಪತ್ರ ಹಾಗೂ ಚಿತ್ರರಚನೆಗಿರುವ ಅಗತ್ಯ ವಸ್ತುಗಳನ್ನು ತರಬೇಕು. ಪ್ರಥಮ ಮತ್ತು ದ್ವಿತೀಯ ಸ್ಥಾನಗಳ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಡಿ.5ರಂದು ಕಾಞಂಗಾಡು ಮುನ್ಸಿಪಾಲಿಟಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು. ಬೆಳಗ್ಗೆ 10ಕ್ಕೆ ನೋಂದಣಿ ಆರಂಭವಾಗಲಿದೆ. ದೂರವಾಣಿ ಸಂಖ್ಯೆ - 9447271765 , 9744005792 , 9847845054.