ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಬಾಲಸಭಾ ಮಕ್ಕಳ ಬಾಲ ಪಂಚಾಯತಿ ರೂಪೀಕರಣ ಕಾರ್ಯಕ್ರಮ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಜರಗಿತು. ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ ಎಸ್ ಉದ್ಘಾಟಿಸಿದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಬಿ ಹನೀಫ್, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲ ಸ್ವರ್ಗ, ಎಸ್ ಟಿ ಪ್ರಮೋಟರ್ ವನಜ, ಶಶಿಕಲ, ಕುಸುಮ, ಲೆಕ್ಕ ಪರಿಶೋಧಕಿ ಮಮತ, ಮೆಂಟರ್ ಗಳಾದ ಭವ್ಯ, ಫಸರುನ್ನಿಸ, ಕೌನ್ಸಿಲರ್ ಪ್ರಸೀತಾ ಮೊದಲಾದವರು ಭಾಗವಹಿಸಿದ್ದರು. ಉದಯ ಕುಮಾರಿ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಬಾಲ ಸಭಾ ಮಕ್ಕಳಿಗೆ ಚಿತ್ರರಚನೆ ಸ್ಪರ್ಧೆ ನಡೆಸಲಾಯಿತು.