HEALTH TIPS

ಕೇರಳದಲ್ಲಿ ರಾಜಕೀಯ ಸಂಚಲನ-ಕಾಂಗ್ರೆಸ್ಸ್ ಸೇರಿದ ಸಂದೀಪ್ ವಾರಿಯರ್-ಕೆಪಿಸಿಸಿ ಘೋಷಣೆ

ಪಾಲಕ್ಕಾಡ್: ಉಪಚುನಾವಣೆಯಲ್ಲಿ ಪಾಲಕ್ಕಾಡ್ ಕ್ಷೇತ್ರವನ್ನು ನೀಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ತೊರೆದಿದ್ದ ಮಾಜಿ ರಾಜ್ಯ ವಕ್ತಾರ ಸಂದೀಪ್ ವಾರಿಯರ್ ಅವರು ಕಾಂಗ್ರೆಸ್ ಸೇರಿದ್ದಾರೆ.

ಕೆಪಿಸಿಸಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹಾಗೂ ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಈ ವಿಷಯ ಪ್ರಕಟಿಸಿದರು.

ಪಾಲಕ್ಕಾಡ್ ಚುನಾವಣೆಯ ಅಂತಿಮ ಘಟ್ಟಕ್ಕೆ ಸಂದೀಪ್ ವಾರಿಯರ್ ಕಾಂಗ್ರೆಸ್ ಪ್ರವೇಶ ಪಡೆದರು. ಎರಡು ವಾರಗಳ ಕಾಲ ನಡೆದ ಚರ್ಚೆಗೆ ನಿನ್ನೆ ರಾತ್ರಿ ಎಐಸಿಸಿ ಕೂಡ ಅನುಮತಿ ನೀಡಿ ಇಂದು ಘೋಷಿಸಲಾಯಿತು. 

ಈ ಹಿಂದೆ ಕೆಲವು ದೂರುಗಳಿದ್ದ ಕಾರಣ ಸಂದೀಪ್ ಅವರನ್ನು ವಕ್ತಾರ ಹುದ್ದೆ ಸೇರಿದಂತೆ ಕರ್ತವ್ಯದಿಂದ ವಜಾಗೊಳಿಸಲಾಗಿತ್ತು. ನಂತರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೆ. ಸುರೇಂದ್ರನ್ ಅವರೇ ಸಂದೀಪ್ ಅವರನ್ನು ನಾಯಕತ್ವದ ಶ್ರೇಣಿಗೆ ಮರಳಿ ತರಲು ಉಪಕ್ರಮ ಕೈಗೊಂಡಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries