ಲಖನೌ: ಏರ್ ಇಂಡಿಯಾ ಮಹಿಳಾ ಪೈಲಟ್ ಸೃಷ್ಟಿ ಟುಳಿ ಎಂಬುವವರ ಮೃತದೇಹವು ಮುಂಬೈನ ಅವರ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಆದರೆ, ಸೃಷ್ಟಿ ಅವರ ಕುಟುಂಬದವರು ಇದನ್ನು ನಿರಾಕರಿಸಿದ್ದಾರೆ.
'ಪ್ರಕರಣ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು' ಎಂದೂ ಕೋರಿದ್ದಾರೆ.
ಸೃಷ್ಟಿ ಅವರ ಸಂಬಂಧಿ, ಗೋರಖಪುರದ ನಿವಾಸಿ ವಿವೇಕ್ ಟುಳಿ ಅವರು ಪ್ರತಿಕ್ರಿಯೆ ನೀಡಿದ್ದು, 'ಪ್ರಿಯಕರ ಆದಿತ್ಯ ಪಂಡಿತ್ ಸೃಷ್ಟಿಗೆ ಹಿಂಸೆ ನೀಡುತ್ತಿದ್ದ. ಜೊತೆಗೆ, ಆಕೆಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ' ಎಂದರು.
'ಸೃಷ್ಟಿ ದಿಟ್ಟ ಹುಡುಗಿ. ಆಕೆ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಸಾರ್ವಜನಿಕ ಸ್ಥಳಗಳಲ್ಲಿಯೂ ಆದಿತ್ಯ ಆಕೆಯ ಮೇಲೆ ರೇಗುತ್ತಿದ್ದ, ಕಿರುಚುತ್ತಿದ್ದ. ಸೃಷ್ಟಿಗೆ ಮಾಂಸಾಹಾರ ಎಂದರೆ ಬಹಳ ಇಷ್ಟ. ಆದರೆ, ಆದಿತ್ಯಗೆ ಆಕೆ ಮಾಂಸಾಹಾರವನ್ನು ಇಷ್ಟಪಡುವುದು ಇಷ್ಟವಾಗುತ್ತಿರಲಿಲ್ಲ. ಈ ಬಗ್ಗೆ ಯಾವಾಗಲೂ ಆಕೆಯನ್ನು ಅವಮಾನಿಸುತ್ತಿದ್ದ' ಎಂದರು.