ಮಾಸ್ಕೊ: ಭಾರತವು ಇತರ ದೇಶಗಳಿಗಿಂತ ವೇಗವಾಗಿ ಆರ್ಥಿಕ ಪ್ರಗತಿಯನ್ನು ಕಾಣುತ್ತಿದ್ದು, ಜಗತ್ತಿನ ಸೂಪರ್‌ಪವರ್ ರಾಷ್ಟ್ರಗಳ ಸಾಲಿಗೆ ಸೇರಲು ಅರ್ಹವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಮಾಸ್ಕೊ: ಭಾರತವು ಇತರ ದೇಶಗಳಿಗಿಂತ ವೇಗವಾಗಿ ಆರ್ಥಿಕ ಪ್ರಗತಿಯನ್ನು ಕಾಣುತ್ತಿದ್ದು, ಜಗತ್ತಿನ ಸೂಪರ್‌ಪವರ್ ರಾಷ್ಟ್ರಗಳ ಸಾಲಿಗೆ ಸೇರಲು ಅರ್ಹವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ವಾಲ್ಡೈ ಚರ್ಚಾ ಕೂಟವು ಸೋಚಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಷ್ಯಾವು ಎಲ್ಲ ವಿಧಗಳಲ್ಲಿ ಭಾರತದೊಂದಿಗಿನ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಿದೆ.
'ಸುಮಾರು 150 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಭಾರತವು ಅಗ್ರಗಣ್ಯ ರಾಷ್ಟ್ರವಾಗಿದೆ. ವಿಶ್ವದ ಆರ್ಥಿಕ ಪ್ರಗತಿಯನ್ನು ಭಾರತ ಮುನ್ನಡೆಸುತ್ತಿದೆ. ಭಾರತದ ಸೇನಾ ವ್ಯವಸ್ಥೆಯಲ್ಲಿ ರಷ್ಯಾದ ಹಲವು ಉಪಕರಣಗಳು ಬಳಕೆಯಾಗುತ್ತಿವೆ. ನಾವು ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾತ್ರ ಮಾಡುತ್ತಿಲ್ಲ, ಬದಲಾಗಿ ಶಸ್ತ್ರಾಸ್ತ್ರಗಳನ್ನು ಜತೆಯಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ' ಎಂದು ತಿಳಿಸಿದರು.
'ಭಾರತ ಮತ್ತು ಚೀನಾ ನಡುವೆ ಗಡಿ ಸಮಸ್ಯೆ ಇರುವುದು ನಿಜ. ಬುದ್ದಿವಂತರು ತಮ್ಮ ರಾಷ್ಟ್ರದ ಭವಿಷ್ಯದ ಬಗ್ಗೆ ಯೋಚಿಸಿ ಸಂಧಾನದ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ' ಎಂದರು.