ಕಾಸರಗೋಡು: ಆಹಾರ ವಿಷಬಾಧೆಯಿಂದ ಬಳಲಿರುವ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಮಾನ್ಯ ಸಮೀಪದ ಆಲಂಪಾಡಿ ಹೈಯರ್ ಸೆಕೆಂಡರಿ ಶಾಲೆಯ ಹಲವಾರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಗುರುವಾರ ಮಧ್ಯಾಹ್ನ ವಿತರಿಸಿದ ಹಾಲು ಮತ್ತು ಮೊಟ್ಟೆ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥರಾದರು ಎನ್ನಲಾಗಿದೆ. ಚೆಂಗಳ ಇ.ಕೆ. ನಾಯನಾರ್ ಆಸ್ಪತ್ರೆ ಹಾಗೂ ವಿದ್ಯಾನಗರದ ಆಸ್ಪತ್ರೆಗಳಿಗೆ ಅಸ್ವಸ್ಥ ಮಕ್ಕಳನ್ನು ದಾಖಲಿಸಲಾಗಿದೆ. ಕೆಲವು ಮಕ್ಕಳನ್ನು ಪ್ರಾಥಮಿಕ ಆರೈಕೆಯ ನಂತರ ಬಿಡುಗಡೆ ಮಾಡಿದ ಸೂಚನೆಗಳೂ ಇವೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಶಾಲಾ ಆಸ್ಪತ್ರೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಲಭ್ಯರಾಗಿಲ್ಲ. ಇದೇ ವೇಳೆ ಬೆಳಗ್ಗೆ ಶಾಲೆಗೆ ತಂದ ಹಾಲನ್ನು ಮಧ್ಯಾಹ್ನ ಕುದಿಸುವುದಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಡುಗೆಮನೆಯಲ್ಲಿ ಸ್ವಚ್ಛತೆಯ ಬಗ್ಗೆಯೂ ಸ್ಥಳೀಯರು ದೂರಿದ್ದಾರೆ. ಏತನ್ಮಧ್ಯೆ ಹಾಲು ಮತ್ತು ಮೊಟ್ಟೆಗಳನ್ನು ಸೇವಿಸಿದ್ದ ಎಲ್ಲಾ ಮಕ್ಕಳು ಅಸ್ವಸ್ಥರಾಗಿಲ್ಲ, ಕೆಲವರಿಗಷ್ಟೇ ಅನಾರೋಗ್ಯ ಕಾಡಿದೆ ಎನ್ನಲಾಗಿದೆ.