ಕಾಸರಗೋಡು: ಸಿಪಿಎಂ ಏರಿಯಾ ಸಮ್ಮೇಳನಕ್ಕಾಗಿ ಕೂಡ್ಲುವಿನಲ್ಲಿ ಸಿದ್ಧಪಡಿಸಿ ಇರಿಸಲಾಗಿದ್ದ ಧ್ವಜಸ್ತಂಬವನ್ನು ಕೂಡ್ಲಿನ ಹಿತ್ತಿಲೊಂದರಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ.
ದ್ವಜಸ್ತಂಬವನ್ನು ಸೋಮವಾರ ನಸುಕಿಗೆ ಕಳವು ನಡೆಸಲಾಗಿರುವ ಬಗ್ಗೆ ಸಿಪಿಎಂ ಏರಿಯಾ ಕಾರ್ಯದರ್ಶಿ ಕೆ.ಎ ಮಹಮ್ಮದ್ ಹನೀಫ್ ನಗರಠಾಣೆ ಪೊಲೀಸರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸುವ ಮಧ್ಯೆ ದ್ವಜಸ್ತಂಬ ಪತ್ತೆಯಾಗಿತ್ತು.