ನವದೆಹಲಿ: ವಿದೇಶಕ್ಕೆ ತೆರಳಲು ನೇಪಾಳಿ ನಾಗರಿಕರಿಗೆ ಭಾರತದ ನಕಲಿ ದಾಖಲೆಗಳನ್ನು ಮಾಡಿಕೊಸಿಕೊಡುತ್ತಿದ್ದ ಗುಂಪೊಂದನ್ನು ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ಭಾರತದ ಪಾಸ್‌ಪೋರ್ಟ್ ಪಡೆಯಲು ಆಧಾರ್, ಮತದಾರರ ಗುರುತಿನ ಚೀಟಿ ಸೇರಿ ಹಲವು ದಾಖಲೆಗಳನ್ನು ಈ ಗುಂಪು ಸೃಷ್ಟಿಸಿ ಕೊಡುತ್ತಿತ್ತು.
ಭಾರತದ ಪಾಸ್‌ಪೋರ್ಟ್ ಇದ್ದ ಇಬ್ಬರು ನೇಪಾಳಿ ನಾಗರಿಕರು ಕಾಂಬೋಡಿಯಾಗೆ ತೆರಳಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಪೊಲೀಸರು ಬಂಧಿಸಿದ್ದಾರೆ.
ಟಿಕೇಟ್ ಹಾಗೂ ವೀಸಾಗಳನ್ನು ವ್ಯವಸ್ಥೆಗೊಳಿಸುವಲ್ಲಿ ಪಾತ್ರವಹಿಸಿದ್ದ ತಬಸ್ಸುಮ್ ಅಲ್ವಿ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.
ಇದಕ್ಕೂ ಮುನ್ನ, ನೇಪಾಳಿ ಪ್ರಜೆಗಳು ದಿನೇಶ್ ಸುಬ್ಬಾ ಮತ್ತು ಶ್ಯಾಮ್ ಸುಬ್ಬಾ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು. ಏಜೆಂಟ್ ಅವರಿಗೆ ಭಾರತದ ನಕಲಿ ದಾಖಲೆಗಳನ್ನು ಪಡೆಯಲು ಸಲಹೆ ನೀಡಿದ್ದರು. ನಕಲಿ ದಾಖಲೆಗಳು ಮತ್ತು ಪ್ರಯಾಣ ವ್ಯವಸ್ಥೆಗಾಗಿ ಏಜೆಂಟ್‌ಗಳು ₹10 ಲಕ್ಷ ಪಡೆದಿದ್ದರು.
ಪೊಲೀಸರು ಈ ಗುಂಪಿನ ಇತರ ಸದಸ್ಯರನ್ನು ಪತ್ತೆ ಮಾಡಲು ಹಾಗೂ ಸಂಬಂಧಿತ ಹಣಕಾಸು ಅಥವಾ ಅಪರಾಧ ಚಟುವಟಿಕೆಗಳನ್ನು ಪರಿಶೀಲಿಸಲು ತನಿಖೆ ನಡೆಸುತ್ತಿದ್ದಾರೆ.